ಅಗಲಿದ ಕನ್ನಡ ಸಾಹಿತ್ಯದ ’ನಾಡಿ’ಸೋಜರಿಗೆ ಹೊಸನಗರದಲ್ಲಿ ಅಶ್ರುತರ್ಪಣ
ಹೊಸನಗರ : ವೈಚಾರಿಕ ಪ್ರಜ್ಞೆಯ ಚಿಂತಕ, ಸರ್ವಧರ್ಮ ಸಮಭಾವದ ಪ್ರತಿಪಾದಕ, ಕನ್ನಡ ಸಾಹಿತ್ಯ ಲೋಕದ ’ನಾಡಿ’ ಎಂದೇ ಜನಪ್ರೀತಿ ಗಳಿಸಿದ್ದ ಕನ್ನಡದ ಖ್ಯಾತ ಕಾದಂಬರಿಕಾರ, ಕಥೆಗಾರ ಡಾ. ನಾರ್ಬರ್ಟ್ ಡಿಸೋಜರವರ ಅಕಾಲಿಕ ನಿಧನಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸಭೆ ನಡೆಸಿ ಅಶ್ರುತರ್ಪಣ ಸಲ್ಲಿಸಿತು.
VIDEO - ಹಿರಿಯ ಸಾಹಿತಿ ನಾ. ಡಿಸೋಜಾ ನಿಧನ - ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಪುತ್ರ ನವೀನ್ ಡಿಸೋಜಾ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಸಂತಾಪ ಸೂಚಕ ಸಭೆಯಲ್ಲಿ, ಸಾಹಿತಿ ಅಂಬ್ರಯ್ಯಮಠ, ಡಾ. ಮಾರ್ಷಲ್ ಶರಾಮ್, ಕೆ. ಇಲಿಯಾಸ್, ಕುಬೇಂದ್ರಪ್ಪ, ಕೆ.ಎಸ್. ರಾಮಕೃಷ್ಣ ಮೂರ್ತಿ, ಕೆ. ಸುರೇಶ್ ಕುಮಾರ್, ಕೆ.ಕೆ. ಅಶ್ವಿನಿ ಕುಮಾರ್, ಜಿ. ಎನ್. ಬಸಪ್ಪಗೌಡ, ಗುರುದೇವ ಭಂಡಾರ್ಕರ್, ಎಸ್. ಹೆಚ್. ಲಿಂಗಮೂರ್ತಿ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದು, ನಾಡಿನ ಅಪ್ರತಿಮ ಬರಹಗಾರ ನಾಡಿಯವರ ನಿಧನಕ್ಕೆ ಕಂಬನಿ ಮಿಡಿದರು.
ಕಾಮೆಂಟ್‌ಗಳಿಲ್ಲ