ಚಾಲಕನ ನಿಯಂತ್ರಣ ತಪ್ಪಿ, ಹೊಸನಗರ ಗುರುಶಕ್ತಿ ಆಟೋಮೊಬೈಲ್ಸ್ ಬಳಿ ಮಗುಚಿಕೊಂಡ ಗೊಬ್ಬರದ ಚೀಲ ತುಂಬಿದ ಲಾರಿ
ಹೊಸನಗರ : ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 766 ಸಿ ಶಿವಮೊಗ್ಗ ರಸ್ತೆಯ ಶ್ರೀ ಗುರು ಶಕ್ತಿ ಆಟೋಮೊಬೈಲ್ಸ್ ಬಳಿ, ಇಂದು ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಗೊಬ್ಬರದ ಚೀಲ ತುಂಬಿಕೊಂಡು ಹೋಗುತ್ತಿದ್ದ ಲಾರಿ (KA - 42, B4300) ಮಗುಚಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಮಂಗಳೂರಿನಿಂದ ಸೊರಬಕ್ಕೆ ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಹಾನಗಲ್ಲಿನ ಲಾರಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದು ರಸ್ತೆಯಲ್ಲಿ ಮಗುಚಿ ಬಿದ್ದಿದೆ.
ಅಪಘಾತ ನಡೆದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿದು ಬಾರಿ ಶಬ್ದ ಉಂಟಾದ ಕಾರಣ ಅಕ್ಕ ಪಕ್ಕದ ಮನೆಯವರು ಕೂಡಲೇ ಎದ್ದು ಬಂದಿದ್ದಾರೆ. ಮತ್ತು ತಕ್ಷಣವೇ ಲಾರಿಯೊಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಹೊರ ತರುವಲ್ಲಿ ನೆರವಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ