ಹೊಸನಗರದಲ್ಲಿ ಹೊಸಂಗಡಿ ದಿವಂಗತ ಲಕ್ಷ್ಮಣ ಶೆಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಹಾಗೂ 12ನೇ ವರ್ಷದ ಅದ್ಧೂರಿ ವಾರ್ಷಿಕೋತ್ಸವ ಸಮಾರಂಭ
ಹೊಸನಗರ : ತಾಲ್ಲೂಕು ಕರಾಟೆ ಶಿಕ್ಷಕರ ಸಂಘ ಹಾಗೂ ರಾಜ್ಯ ಕ್ರೀಡಾ ಕರಾಟೆ ಶಿಕ್ಷಕರ ಸಮಿತಿ ಆಶ್ರಯದಲ್ಲಿ ಪಟ್ಟಣದ ಈಡಿಗರ ಸಭಾಭವನದಲ್ಲಿ ಐಕಿ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಸಹಯೋಗದೊಂದಿಗೆ ಹೊಸಂಗಡಿಯ ದಿವಂಗತ ಲಕ್ಷ್ಮಣ ಶೆಟ್ಟಿಯವರ ಸ್ಮರಣಾರ್ಥ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಹಾಗೂ ಸಂಘದ 12ನೇ ವರ್ಷದ ವಾರ್ಷಿಕೋತ್ಸವವನ್ನು ಕರಾಟೆಯ ಭೀಷ್ಮ ಹನ್ಷಿ ಸಿಎ ವಿಜಯನ್ ಅಧ್ಯಕ್ಷತೆಯಲ್ಲಿ ಇಂದು ನಡೆಸಲಾಯಿತು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೋಡೂರಿನ ಬ್ಲಾಸಮ್ ಸ್ಕೂಲಿನ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಅವರು, ಆತ್ಮರಕ್ಷಣೆ ಹಾಗೂ ಆರೋಗ್ಯಕ್ಕೆ ಕರಾಟೆ ಅಗತ್ಯ. ರಾಘವೇಂದ್ರ ಅವರು ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಹೊಸನಗರದಲ್ಲಿ ಆಯೋಜಿಸಲಿ. ಅದಕ್ಕೆ ನಾವು ಬೇಕಾದ ಎಲ್ಲಾ ಸಹಕಾರವನ್ನು ಕೊಡುತ್ತೇವೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್ ಅವರು ಮಾತನಾಡಿ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ನಮಗೆ ಬೇಕಾಗಿರುವ ಸಧೃಡತೆಯನ್ನು ಕರಾಟೆ ನಮಗೆ ಕೊಡುತ್ತದೆ. ಶಿಕ್ಷಣ ಇಲಾಖೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ನೀವು ಇಲ್ಲಿ ಗಳಿಸುವ ಸರ್ಟಿಫಿಕೇಟ್‌ಗಳು ನಿಮಗೆ ಉಪಯೋಗಕ್ಕೆ ಬರುತ್ತದೆ ಎಂದು ಕರಾಟೆ ಪ್ರಶಿಕ್ಷಣಾರ್ಥಿಗಳಿಗೆ ಕರಾಟೆ ಸೇರಿದಂತೆ ಕ್ರೀಡಾಕ್ಷೇತ್ರದಲ್ಲಿರುವ ಭವಿಷ್ಯದ ಬಗ್ಗೆ ವಿವರಿಸಿದರು.
ಈ ಸಮಾರಂಭದಲ್ಲಿ ತಾಲ್ಲೂಕು ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಹಾಗೂ ವಕೀಲ ಮೋಹನ್ ಜಿ. ಶೆಟ್ಟಿ, ಕೋಡೂರಿನ ಬ್ಲಾಸಮ್ ಸ್ಕೂಲಿನ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮಂಜುನಾಥ ಬ್ಯಾಣದ್, ನಿಟ್ಟೂರಿನ ಪ್ರಜ್ಞಾ ಭಾರತಿ ಶಾಲೆಯ ಅಶ್ವಥ್, ಹೊಸಂಗಡಿಯ ಲಿಖಿಲ್ ಲಕ್ಷ್ಮಣ ಶೆಟ್ಟಿ, ಹೆಚ್ ಡಿ ಕೋಟೆ ಕರಾಟೆ ಶಾಲೆಯ ವಿ. ರಾಯಪ್ಪ, ಈಡಿಗರ ಸಂಘದ ಉಪಾಧ್ಯಕ್ಷ ಏರಿಗೆ ಉಮೇಶ್, ಪತ್ರಕರ್ತ ರವಿ ಬಿದನೂರು, ಕರಾಟೆ ಶಿಕ್ಷಕರ ಸಂಘದ ಖಜಾಂಚಿ ನಗರ ಶ್ರೀಧರ್ ಶೆಟ್ಟಿ, ಲಕ್ಷ್ಮಣ ಆಚಾರ್ಯ, ಹರೀಶ್ ಕುಮಾರ, ಶಿವರಾಮಕೃಷ್ಣ, ರಾಜೇಶ್, ಮಹಾಬಲ ಜೋಶಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್, ಹೋಲಿ ರೆಡಿಮೀರ್ ವಿದ್ಯಾಸಂಸ್ಥೆ ಮುಖ್ಯಸ್ಥೆ ಮೊದಲಾದವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಐಕಿ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಸಮಾರಂಭದಲ್ಲಿ ಪ್ರತಿಭಾವಂತ ಕರಾಟೆಪಟುಗಳಿಗೆ ಐಕಿ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಮುಖ್ಯಸ್ಥರಾದ ರೆನ್ಷಿ ಜೆ.ಕೆ. ರಾಘವೇಂದ್ರ ಅವರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿದರು.
ರಾಜ್ಯದೆಲ್ಲೆಡೆಯಿಂದ ಆಗಮಿಸಿದ 800ಕ್ಕೂ ಹೆಚ್ಚು ಕರಾಟೆ ಶಿಕ್ಷಣಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ತೇಜಸ್ವಿನಿ ಜಿ. ಯಾದವ್ ಪ್ರಾರ್ಥಿಸಿದರು. ನಗರ ರಾಘವೇಂದ್ರ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ