Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿ ಬದುಕು ಹಸನು ಮಾಡಿ - ಹೊಸನಗರ ತಾಲ್ಲೂಕು ಆಶಾ ಕಾರ್ಯಕರ್ತರಿಂದ ಶಾಸಕ ಆರಗ ಜ್ಞಾನೇಂದ್ರರಿಗೆ ಮನವಿ

ಹೊಸನಗರ : ರಾಜ್ಯವನ್ನು ತಲ್ಲಣಗೊಳಿಸಿದ ಮಾರಣಾಂತಿಕ ಕೋವಿಡ್-19 ಉಲ್ಬಣಗೊಂಡಾಗ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ, ಫ್ರಂಟ್‌‌ಲೈನ್ ವಾರಿಯರ್ಸ್ ಎನ್ನುವ ಹೆಗ್ಗಳಿಕೆ ಪಡೆದ ಆಶಾ ಕಾರ್ಯಕರ್ತರಿಗೆ ಇಂದಿನ ಬೆಲೆ ಏರಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ. ಆದಕಾರಣ ರಾಜ್ಯ ಸರ್ಕಾರ ತಕ್ಷಣ ನಮ್ಮ ನಿರಂತರ ಸಮಸ್ಯೆಗಳನ್ನು ಹಾಗೂ ಸೇವೆಯನ್ನು ಪರಿಗಣಿಸಿ, ತುರ್ತು ಕ್ರಮ ಕೈಗೊಳ್ಳುವ ಮೂಲಕ ಸ್ಪಂದಿಸಬೇಕಿದೆ ಎನ್ನುವ ಮನವಿಯನ್ನು ತಾಲ್ಲೂಕು ಆಶಾ ಕಾರ್ಯಕರ್ತರು ಇಂದು ಮಾಜಿ ಗೃಹ ಸಚಿವರೂ, ಶಾಸಕರೂ ಆದ ಆರಗ ಜ್ಞಾನೇಂದ್ರರವರ ಅವರಿಗೆ ಸಲ್ಲಿಸಿದರು ಹಾಗೂ ತಮ್ಮ ವೃತ್ತಿ ಬದುಕಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಆಗ್ರಹಿಸಿದರು.

ಶಾಸಕರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 15 ಸಾವಿರ ರೂ ನೀಡಬೇಕು. ಆಶಾ ಪೇಮೆಂಟ್ ಪ್ರಕ್ರಿಯೆಗೆ ಆರ್‌‌ಸಿಹೆಚ್ ಪೋರ್ಟಲ್ ಲಿಂಕ್ ಮಾಡಿರುವುದನ್ನು ಕೈಬಿಡಬೇಕು. ಮೊಬೈಲ್ ಕೆಲಸಗಳನ್ನು ಒತ್ತಾಯಪೂರಕವಾಗಿ ಮಾಡಿಸಿಕೊಳ್ಳುವುದು ಅಥವಾ ಮೊಬೈಲ್ ಡಾಟಾ ಒದಗಿಸಿ ಕೆಲಸ ತೆಗೆದುಕೊಳ್ಳಬೇಕು. ಯಾರಿಗೆ ಮೊಬೈಲ್ ಮೂಲಕ ಕೆಲಸ ಮಾಡುವುದು ಅಸಾಧ್ಯವಿದೆಯೋ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಸ್ಯೆಗಳನ್ನು ವಿವರಿಸಿದರು.

60 ವರ್ಷಕ್ಕೆ ಸೇವಾ ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜಾರಿಯಲ್ಲಿರುವ ಸೇವಾ ಅವಧಿಯ ನಂತರದ 5 ಲಕ್ಷ ರೂಪಾಯಿಗಳ ನೆರವನ್ನು ನೀಡುವಂತಾಗಬೇಕು. ಆಶಾ ಕಾರ್ಯಕರ್ತರು ಇನ್ನೂ ಉತ್ತಮ ಸೇವೆ ಸಲ್ಲಿಸಲು ದ್ವಿಚಕ್ರ ವಾಹನ ಸೌಲಭ್ಯ ಕಲ್ಪಿಸಬೇಕು. ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತ ಫಲಾನುಭವಿಗಳನ್ನು ಆಶಾ ಕಾರ್ಯಕರ್ತೆಯನ್ನಾಗಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕು ಸೇರಿದಂತೆ ತಮ್ಮ ಹತ್ತು ಹಲವು ಬೇಡಿಕೆಗಳ ಮನವಿಯನ್ನು ಆಶಾ ಕಾರ್ಯಕರ್ತರು ಶಾಸಕರಿಗೆ ಸಲ್ಲಿಸಿದರು.

CLICK ಮಾಡಿ - ಕುವೆಂಪು ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕೊಡಚಾದ್ರಿ ಕಾಲೇಜ್ ಕ್ರೀಡಾಪಟುಗಳಿಂದ 2 ಚಿನ್ನ, 4 ಬೆಳ್ಳಿ, 2 ಕಂಚಿನ ಪದಕ ಬೇಟೆ

ಈ ಸಂದರ್ಭದಲ್ಲಿ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ನಾಗರತ್ನ, ಸಹಕಾರ್ಯದರ್ಶಿ ನಾಗರಹಳ್ಳಿ ಸುಮಾ, ಶಾರದಾ ಸಮಗಾರು, ನಗೀನಾ, ಪದ್ಮಾವತಿ, ಶೋಭಾ, ಸತ್ಯವತಿ, ಸರೋಜಾ, ಶಾಂತ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ