Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ 94ಸಿ ಹಾಗೂ ಬಗರ್ ಹುಕುಂ ಹಕ್ಕುಪತ್ರ ವಿತರಣೆ - ಹೊಸನಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು

ಹೊಸನಗರ : ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ 94ಸಿ ಹಾಗೂ ಬಗರ್ ಹುಕುಂ ಹಕ್ಕುಪತ್ರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿ, ಈ ಕುರಿತು ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಸೂಚನೆ ನೀಡಿದರು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಬಗರ್ ಹುಕುಂ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ವಿನಾಕಾರಣ ಸಾಗುವಳಿ ರೈತರ ಬಗರ್ ಹುಕುಂ ದಾಖಲೆಯ ಕಡತಗಳನ್ನು ನಿರಾಕರಣೆ ಮಾಡಬಾರದು. ಸ್ಥಳ ಪರಿಶೀಲನೆ ನಂತರ ಅಗತ್ಯ ದಾಖಲೆ ಸಂಗ್ರಹಿಸಿದರೆ ಮಾತ್ರವೇ ಕಡತಗಳನ್ನು ಸಭೆಯಲ್ಲಿ ಮಂಡಿಸಬೇಕು. ಯಾವೊಬ್ಬ ಅರ್ಹ ಫಲಾನುಭವಿಗೂ ಅನ್ಯಾಯವಾಗದಂತೆ ಸದಸ್ಯರು ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಸಮಿತಿ ಕಾರ್ಯದರ್ಶಿ, ತಹಶೀಲ್ದಾರ್ ರಶ್ಮಿ ಮಾತನಾಡಿ, ಪ್ರಸಕ್ತ ನಮೂನೆ - 50 ಬಗರ್ ಹುಕುಂ ಅರ್ಜಿಗಳಲ್ಲಿ ಒಂದು ಅರ್ಜಿ ಬಾಕಿ ಉಳಿದಿದೆ. ನಮೂನೆ-53ರಲ್ಲಿ 163 ಅರ್ಜಿಗಳು ವಿಲೇವಾರಿಯಾಗಬೇಕಿದೆ. ನಮೂನೆ - 57ರಲ್ಲಿ ಸುಮಾರು 19 ಸಾವಿರ ಅರ್ಜಿಗಳಿವೆ ಎಂದು ಸಭೆಯ ಗಮನಕ್ಕೆ ತಂದರು. 

CLICK ಮಾಡಿ - ಸೊನಲೆ ಹೈಸ್ಕೂಲಿಗೆ ಹೋಗಿದ್ದ SSLC ಹುಡುಗ ಶಾಲೆಯಿಂದಲೇ ನಾಪತ್ತೆ - ಮನೆಗೆ ಬಾರದ ಮಗನ ಹುಡುಕಿಕೊಡಲು ಪೋಷಕರ ಮನವಿ

94ಸಿ ಅರ್ಜಿದಾರರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ವ್ಯಾಪಕ ತೊಂದರೆ ನೀಡುತ್ತಿರುವ ದೂರುಗಳು ಬಂದಿವೆ. ಅರ್ಜಿದಾರರ ನಿವೇಶನ ಅರಣ್ಯ ಇಲಾಖೆ ಸರಹದ್ದಿಗೆ ಸೇರಿದೆ ಎಂದು ಇಲಾಖೆ ನಿತ್ಯ ಕಿರುಕುಳ ನೀಡುತ್ತಿದೆ. ಇದರಿಂದ 94ಸಿ ಅರ್ಜಿದಾರ ಬೇಸತ್ತು ಹೋಗಿದ್ದಾನೆ. ಸುಮಾರು ನೂರಾರು ಎಕರೆ ಇರುವ ಅರಣ್ಯ ಪ್ರದೇಶದಲ್ಲಿ ಕೇವಲ 30X40 ನಿವೇಶನವನ್ನೇ ಇಲಾಖೆ ಬೊಟ್ಟು ಮಾಡುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಅರ್ಜಿದಾರರ ಸಂಕಷ್ಟ ಅರಿಯುವ ಹಾಗೂ ಸಮಸ್ಯೆ ಬಗೆಹರಿಸಲು ಸಮಿತಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಸಮಿತಿ ಸದಸ್ಯ ಎನ್.ಇ. ಸ್ವಾಮಿ ಸಭೆಯ ಗಮನಕ್ಕೆ ತಂದರು.

ಚಳಿಗಾಲದ ಅಧಿವೇಶನದ ನಂತರ ಮತ್ತೊಮ್ಮೆ ಸಭೆ ಸೇರಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಿ. ಹೋಬಳಿವಾರು ಸಭೆ ನಡೆಸಿ ಅರ್ಜಿದಾರರಿಂದ ಅಗತ್ಯ ದಾಖಲೆ ಸಂಗ್ರಹಿಸಿ, ಮುಂದಿನ ಸಭೆಯಲ್ಲಿ ಮಂಡಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಹರತಾಳು ಗ್ರಾಮ ಪಂಚಾಯಿತಿ ಸದಸ್ಯೆ ಸಾಕಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಚಂದ್ರಮೌಳಿ ಉಪಸ್ಥಿತರಿದ್ದರು.

ಹೊಂದಾಣಿಕೆ ಮೂಲಕ ಕರ್ತವ್ಯ ನಿರ್ವಹಿಸಿ - ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಹೊಸನಗರ ಆಸ್ಪತ್ರೆ ಸಿಬ್ಬಂದಿಗಳಿಗೆ ಶಾಸಕ ಬೇಳೂರು ಸೂಚನೆ

ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ವೈದ್ಯರ ಸೇವೆಗೆ ಅವಕಾಶವಿದ್ದು ಹಾಲಿ ಕೇವಲ ನಾಲ್ಕು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ರಾತ್ರಿ ವೇಳೆಯಲ್ಲಿ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಅನಾನೂಕೂಲವಾಗಿದೆ. ಕೂಡಲೇ ಹೆಚ್ಚಿನ ವೈದ್ಯರನ್ನು ನೇಮಕ ಮಾಡುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಜಯನಗರ ಗೋಪಿನಾಥ್ ವಿನಂತಿಸುವ ಮೂಲಕ ಸಭೆಯ ಗಮನ ಸೆಳೆದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ರಾತ್ರಿ ವೇಳೆಯಲ್ಲಿ ಕಾರ್ಯ ನಿರ್ವಹಿಸುವ ಶುಶ್ರೂಷಕಿಯರಿಗೆ ಸೂಕ್ತ ಭದ್ರತೆ ಇಲ್ಲ. ಮದ್ಯದ ಅಮಲಿನಲ್ಲಿ ಬರುವ ರೋಗಿಗಳ ಸಹಾಯಕರಿಂದ ಅಭದ್ರತೆ ಕಾಡುತ್ತಿದೆ. ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ಭದ್ರತಾ ಸಿಬ್ಬಂದಿಯ ನೇಮಕಕ್ಕೆ ಸಮಿತಿ ಮುಂದಾಗಬೇಕಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳ ಪರವಾಗಿ ಸಮಿತಿಯ ಸದಸ್ಯೆ ಸಿಂಥಿಯಾ ಧ್ವನಿ ಎತ್ತಿದರು.

ಪ್ರತಿದಿನ ಸುಮಾರು ನಾಲ್ಕು ನೂರು ರೋಗಿಗಳಿಗೆ ಔಷಧಿ ವಿತರಣೆ ನಡೆದಿದೆ. ಇದು ಓರ್ವ ಸಿಬ್ಬಂದಿಯಿಂದ ಸಾಧ್ಯವಾಗದ ಕೆಲಸ. ಹೆಚ್ಚುವರಿ ಫಾರ್ಮಾಸಿಸ್ಟ್ ನಿಯೋಜನೆಗೆ ಸಿಬ್ಬಂದಿ ಧನ್ಯಕುಮಾರ್ ಸಭೆಗೆ ವಿನಂತಿಸಿದರು. ಕ್ಲಿನಿಕಲ್ ಲ್ಯಾಬೊರೇಟರಿ ಸಿಬ್ಬಂದಿಗಳು ಸಕಾಲಕ್ಕೆ ಕರ್ತವ್ಯ ಹಾಜರಾಗುತ್ತಿಲ್ಲ. ಖಾಸಗಿ ಲ್ಯಾಬ್‌ಗಳ ಮೊರೆ ಹೋಗುತ್ತಿದ್ದಾರೆ. ಇದು ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನಲೆಯಲ್ಲಿ ಸಿಬ್ಬಂದಿಗಳ ನಡುವೆ ಪರಸ್ಪರ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಲು ಸಭೆ ಸೂಚಿಸಿತು. 

CLICK ಮಾಡಿ - ರಿಪ್ಪನ್‌ಪೇಟೆ ಬಾಳೂರಿನ 3ನೇ ತರಗತಿ ವಿದ್ಯಾರ್ಥಿ ಮಣಿಕಂಠನಿಗೆ ರಾಜ್ಯ ಸರ್ಕಾರದ ಮಕ್ಕಳ ಹೊಯ್ಸಳ ಶೌರ್ಯ ಪ್ರಶಸ್ತಿ

ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾಗರದಂತಹ ಜನಜಂಗುಳಿ ಇರುವ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸುವ ಮೂಲಕ ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ಗಳಿಸಿದ್ದಾರೆ. ಇಲ್ಲಿ ಕೇವಲ ಇನ್ನೂರು-ಮುನ್ನೂರು ರೋಗಿಗಳ ಆರೋಗ್ಯ ತಪಾಸಣೆಗೆ ನೂರೆಂಟು ಕಾರಣ ಹೇಳಬೇಡಿ. ಹೊಂದಾಣಿಕೆಯಿಂದ ಎಲ್ಲಾ ಕರ್ತವ್ಯ ನಿರ್ವಹಿಸಿ ಎಂಬುದಾಗಿ ತಿಳಿಸಿದರು.

ಆಸ್ಪತ್ರೆ ಮೇಲ್ಛಾವಣಿ ದುರಸ್ತಿ, ಅಗತ್ಯ ಹೆಚ್ಚುವರಿ ಗೋದಾಮು ನಿರ್ಮಾಣ, ಸಿಬ್ಬಂದಿಗಳಿಗೆ ಶೌಚಾಲಯ, ಸಾರ್ವಜನಿಕ ವಾಹನಗಳಿಗೆ ನಿಲುಗಡೆ, ಖರೀದಿ-ಖರ್ಚು ಸೇರಿದಂತೆ ವಿವಿಧ ವಿಷಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ವೈದ್ಯಾಧಿಕಾರಿ ಡಾ. ನಟರಾಜ್, ಜಿಲ್ಲಾ ಕೋ-ಆರ್ಡಿನೇಟರ್ ಡಾ. ಮೋಹನ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಸುರೇಶ್, ಆರೋಗ್ಯ ಆಡಳಿತಾಧಿಕಾರಿ ಡಾ. ಗುರುಮೂರ್ತಿ, ಡಾ. ಲಿಂಗರಾಜು, ಡಾ. ಹೇಮಂತ್, ಡಾ. ಆತ್ಮ, ಡಾ. ಶಂಶುದ್ ಬೇಗಂ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಹಮದ್ ಇಕ್ಬಾಲ್, ವಿನಯ್ ಕುಮಾರ್ ದುಮ್ಮ, ಹರೀಶ್, ಚಂದ್ರಕಲಾ, ಎಸ್.ಕೆ. ರಾಜು, ಸ್ವಾಮಿ, ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ