ಹೊಸನಗರದ 3 ಅಡಿ ಎತ್ತರದ ’ಓಟದ ರಾಣಿ ಅರ್ಚನಾ’ಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ಅದ್ಧೂರಿ ಸನ್ಮಾನ
ಹೊಸನಗರ : ಪಟ್ಟಣದ ಮಲೆನಾಡು ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅರ್ಚನಾ ಶಿವಮೊಗ್ಗದಲ್ಲಿ ನಡೆದ 17 ವರ್ಷದೊಳಗಿನ ಕ್ರೀಡಾಕೂಟದ 3 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಂಭ್ರಮದ ಹಿನ್ನೆಲೆಯಲ್ಲಿ, ಇಲ್ಲಿನ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದವರು ಇಂದು ಮಲೆನಾಡು ಪ್ರೌಢಶಾಲೆ ಆವರಣದಲ್ಲಿ ಅರ್ಚನಾರನ್ನು ಅಭಿನಂದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಈ ಸಂದರ್ಭದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಎಸ್. ಕಳೂರು, ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಿ. ಆರ್. ವಿನಯ್, ಹಿರಿಯ ಕ್ರೀಡಾಪಟು ಕೆ. ಇಲಿಯಾಸ್, ಹಿರಿಯ ಕಲಾವಿದರಾದ ಜೀವಿ ವೇಣುಗೋಪಾಲ್, ಬಿ.ಎಸ್. ಸುರೇಶ, ಎಂ. ಕೆ. ವೆಂಕಟೇಶಮೂರ್ತಿ, ಕೆ. ಜಿ. ನಾಗೇಶ್, ದೀಪಕ್ ಸ್ವರೂಪ್, ನವಶಕ್ತಿ ರಮೇಶ್, ಅರವಿಂದ, ಗಣೇಶ ಗೌಡ, ಮಲೆನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುಧಾಕರ್, ಕ್ರೀಡಾ ಶಿಕ್ಷಕರಾದ ಸುರೇಶ್, ಜ್ಯೋತಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಮೂರು ಅಡಿ 11 ಇಂಚು ಎತ್ತರದ ಕುಮಾರಿ ಅರ್ಚನಾರವರ ಸಾಧನೆಯನ್ನು ಕೊಂಡಾಡಿ, ರಾಜ್ಯಮಟ್ಟದಲ್ಲೂ ಅರ್ಚನಾ ಕ್ರೀಡಾ ಸಾಧನೆಯನ್ನು ಮುಂದುವರಿಸಿ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಲಿ ಎಂದು ಶುಭ ಹಾರೈಸಿದರು.
ಅರ್ಚನಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯಾಗಿದ್ದು, ತಾಲ್ಲೂಕಿನ ಕೊಡಸೆ ಹೆಬ್ಬುರಳಿಯ ಬಡ ಕೃಷಿಕ ಕೃಷ್ಣ ಹಾಗೂ ಕಲಾವತಿ ದಂಪತಿಗಳ ಪುತ್ರಿಯಾಗಿದ್ದು, ಜಿಲ್ಲಾ ಮಟ್ಟದಲ್ಲಿ 3000 ಮೀಟರ್ ಓಟವನ್ನು ಕೇವಲ 11 ನಿಮಿಷ 4 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಮೆಂಟ್‌ಗಳಿಲ್ಲ