3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ಯಡೂರು ಗೌಟಾಣಿಯ ಭರತ್ ನಾಪತ್ತೆ - ಮಾಣಿ ಜಲಾಶಯದ 70 ಅಡಿ ಆಳದಲ್ಲಿ ನಡೆದಿದೆ ಶೋಧ ಕಾರ್ಯ
ಹೊಸನಗರ: ತಾಲ್ಲೂಕಿನ ನಗರ ಹೋಬಳಿ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಳೆದ ಮೂರು ದಿನದಿಂದ ನಾಪತ್ತೆಯಾದ ಘಟನೆ ನಡೆದಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಹೊರಟ ಭರತ್ ವಾಪಾಸ್ಸು ಮನೆಗೆ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮಾಣಿ ಡ್ಯಾಂ ಸಮೀಪ ಭರತ್ ಬೈಕ್ ಕಂಡುಬಂದಿದ್ದು, ಜಲಾಶಯ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ತೀರ್ಥಹಳ್ಳಿ ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕೂಡ ಶೋಧಕಾರ್ಯ ನಡೆಸುತ್ತಿದೆ. ಜಲಾಶಯದ ಬುಡದಲ್ಲಿ 70 ಅಡಿಗೂ ಹೆಚ್ಚು ಆಳವಿದ್ದು ಶೋಧಕಾರ್ಯ ಸವಾಲಾಗಿ ಪರಿಣಮಿಸಿದೆ.
ಭರತ್ ಕೆಪಿಸಿಯ ವಾರಾಹಿ ಮಾಣಿ ಡ್ಯಾಂನಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಭರತ್‌ಗೆ 9 ವರ್ಷದ ಮಗನಿದ್ದು, ಪತ್ನಿ ಪೂರ್ಣೇಶ್ವರಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭರತ್ ಪತ್ತೆ ಕಾರ್ಯ ಮುಂದುವರೆದಿದೆ.
ಕಾಮೆಂಟ್‌ಗಳಿಲ್ಲ