Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಗುಳ್ಳೆಕೊಪ್ಪ ಎಸ್. ರವಿಕುಮಾರ್ ಸಮಾಜ ಸೇವೆಗೆ ರಿಪ್ಪನ್‌ಪೇಟೆ ಕಲಾ ಕೌಸ್ತುಭ ಕನ್ನಡ ಸಂಘದಿಂದ ಆತ್ಮೀಯ ಸನ್ಮಾನ

ಹೊಸನಗರ: ತಾಲ್ಲೂಕಿನ ರಿಪ್ಪನ್‌‌ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣಾ ಕಾರ್ಯಕ್ರಮ ಇತ್ತೀಚೆಗೆ ಜರುಗಿದ್ದು, ಹೊಸನಗರ ಮೂಲದ ಬೆಂಗಳೂರಿನ ಅಭಿವೃದ್ಧಿ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಕಾ ಸಂಸ್ಥೆಯ ಸಿಇಓ ಎಸ್. ರವಿಕುಮಾರ್ ಅವರ ಸಮಾಜಸೇವೆ ಪರಿಗಣಿಸಿ ಪ್ರಶಸ್ತಿ ನೀಡಿ ಸಂಘ ಆತ್ಮೀಯವಾಗಿ ಸನ್ಮಾನಿಸಿತು.

ಈ ಸಂದರ್ಭದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳಾದ ಗುರುಮೂರ್ತಿ ಕೆರೆಹಳ್ಳಿ, ಸತೀಶ್ ಪೂಜಾರಿ, ಶೈಲಾಪ್ರಭು, ಎಂ.ಬಿ. ಮಂಜುನಾಥ ಗೌಡ ಹಾಗು ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಪ್ರವೀಣ್ ಎಸ್.ಪಿ. ಸೇರಿದಂತೆ ಹಲವರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ