ಐಸಿಎಸ್ಇ ಜೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಕೋಣಂದೂರು ರಾಷ್ಟ್ರೀಯ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ
ಕೋಣಂದೂರು : ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ಇದೇ ಅಕ್ಟೋಬರ್ 26 ಮತ್ತು 27ರಂದು ನಡೆದ ಐಸಿಎಸ್ಇ ಜೋನಲ್ ಮಟ್ಟದ ಕ್ರೀಡಾಕೂಟದ 14 ಮತ್ತು 17 ವರ್ಷದ ವಯೋಮಿತಿಯೊಳಗಿನ ವಿಭಾಗದಲ್ಲಿ ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿ, ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
14 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ 3 ಪ್ರಥಮ ಸ್ಥಾನ, 3 ದ್ವಿತೀಯ ಸ್ಥಾನ, 2 ತೃತೀಯ ಸ್ಥಾನ ಲಭಿಸಿದೆ. ಬಾಲಕಿಯರ ವಿಭಾಗದಲ್ಲಿ 4 ಪ್ರಥಮ ಸ್ಥಾನ, 5 ದ್ವಿತೀಯ ಸ್ಥಾನ, 3 ತೃತೀಯ ಸ್ಥಾನ ಲಭಿಸಿದೆ.
17 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ 3 ಪ್ರಥಮ ಸ್ಥಾನ, 3 ದ್ವಿತೀಯ ಸ್ಥಾನ, 5 ತೃತೀಯ ಸ್ಥಾನವನ್ನು ಗೆದ್ದುಕೊಂಡಿದ್ದರೆ, ಬಾಲಕಿಯರ ವಿಭಾಗದಲ್ಲಿ 1 ಪ್ರಥಮ ಸ್ಥಾನ, 3 ದ್ವಿತೀಯ ಸ್ಥಾನ, 2 ತೃತೀಯ ಸ್ಥಾನ ಪಡೆದಿದ್ದಾರೆ.
ವಾಲಿಬಾಲ್‌ನಲ್ಲಿ 17 ವರ್ಷದ ಮತ್ತು 14 ವರ್ಷದ ಬಾಲಕರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಗೆ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಜನರಾಗಿದ್ದಾರೆ.
CLICK ಮಾಡಿ - ಮಾರುತೀಪುರದಲ್ಲಿ ಹಾಡುಹಗಲೇ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಕಳ್ಳರು
ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲ ಕೆ.ಎಸ್.ವಾಸುದೇವ, ಆಡಳಿತ ಮಂಡಳಿ ಅಭಿನಂದಿಸಿದೆ. ಶಿಕ್ಷಕ ಹೆಚ್.ವಿ. ಮುರಳೀಧರ, ದೈಹಿಕ ಶಿಕ್ಷಕರಾದ ಹೆಚ್.ಬಿ. ರಜಿತ್ ಕುಮಾರ್, ದರ್ಶನ್ ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಅಪಾರ ಶ್ರಮ ವಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ