Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಾರುತೀಪುರದಲ್ಲಿ ಹಾಡುಹಗಲೇ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಕಳ್ಳರು

ಹೊಸನಗರ : ತಾಲ್ಲೂಕಿನ ಮಾರುತೀಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸುಧೀಂದ್ರ ಹೊಳ್ಳ ಎನ್ನುವವರ ಮನೆ ಬೀಗ ಮುರಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನವಾಗಿದ್ದು, ಮಧ್ಯಾಹ್ನ 11.30 ರಿಂದ 1 ಗಂಟೆಯ ನಡುವೆ ಈ ಕಳ್ಳತನ ನಡೆದಿದ್ದು, ಮುಂಬಾಗಿಲಿನ ಬೀಗ ಮುರಿದು ಕಳ್ಳರು ಕಳ್ಳತನವೆಸಗಿದ್ದಾರೆ.

CLICK ಮಾಡಿ - ಹೊಸನಗರ ಹೆಬ್ಬುರುಳಿಯ ನವೀನ್ ಹೆಚ್.ಎನ್. ಅವರಿಗೆ ಕುವೆಂಪು ವಿ.ವಿ ಡಾಕ್ಟರೇಟ್

ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನದಳ, ಪೋಲಿಸ್ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮನೆಯಲ್ಲಿ ಹಗಲು ಹೊತ್ತಿನಲ್ಲೇ ಕಳ್ಳರು ತಮ್ಮ ಕೈಚಳಕ ತೋರಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದ್ದರೆ, ಇನ್ನೊಂದೆಡೆ ತಾಲ್ಲೂಕಿನ ಪೊಲೀಸ್ ಇಲಾಖೆಯ ವೈಫಲ್ಯಕ್ಕೂ ಇದು ಕನ್ನಡಿ ಹಿಡಿದಿದೆ.

ಕಾಮೆಂಟ್‌ಗಳಿಲ್ಲ