Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಹೆಬ್ಬುರುಳಿಯ ನವೀನ್ ಹೆಚ್.ಎನ್. ಅವರಿಗೆ ಕುವೆಂಪು ವಿ.ವಿ ಡಾಕ್ಟರೇಟ್

ಹೊಸನಗರ : ತಾಲ್ಲೂಕಿನ ನವೀನ ಹೆಚ್.ಎನ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಕುವೆಂಪು ವಿಶ್ವವಿದ್ಯಾನಿಲಯವು ನವೀನ ಹೆಚ್.ಎನ್. ಇವರಿಗೆ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದ ’ಕನ್ಸ್ಯೂಮರ್  ಪರ್ಸೆಪ್ಷನ್ ಆನ್ ಮಾರ್ಕೆಟಿಂಗ್ ಮಿಕ್ಸ್ ಸ್ಟ್ಯಾಟರ್ಜಿ ಆಫ್ ಕನ್ಸ್ಯೂಮರ್ ಪ್ರಾಡಕ್ಟ್ ಇನ್ ರೂರಲ್ ಅಂಡ್‌‌ ಅರ್ಬನ್ ಮಾರ್ಕೆಟ್‌ ಆನ್ ಇಂಪರಿಕಲ್ ಸ್ಟಡಿ ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ಕುವೆಂಪು ವಿ.ವಿ.ಯ ಎಂ.ಬಿ.ಎ. ವಿಭಾಗದ ಪ್ರೊಫೆಸರ್ ಹೆಚ್.ಎನ್. ರಮೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್‌‌ ಪದವಿ ನೀಡಿ ಗೌರವಿಸಿದೆ. 

CLICK ಮಾಡಿ - ದೀಪಾವಳಿ - ಹೊಸನಗರದ ಅಧಿಕಾರಿಗಳಿಗೆ ಸಿಹಿ ಹಂಚಿ ಶುಭ ಕೋರಿದ ಶಾಸಕ ಬೇಳೂರು

ನವೀನ್ ಹೆಚ್.ಎನ್. ಇವರು ಹೊಸನಗರ ತಾಲ್ಲೂಕಿನ ಹೆಬ್ಬುರುಳಿ ಗ್ರಾಮದ ಹೆಚ್.ಕೆ. ನಾರಾಯಣ ಕಿರುವಾಸೆ ಮತ್ತು ಹೇಮಾವತಿ ಹೆಚ್.ಎನ್. ದಂಪತಿಗಳ ಪುತ್ರರಾಗಿದ್ದು, ಇವರ ಈ ಸಾಧನೆ ಹೆಬ್ಬುರಳಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದೆ.

ಕಾಮೆಂಟ್‌ಗಳಿಲ್ಲ