Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಗಾಂಧಿ ಜಯಂತಿ ಪ್ರಯುಕ್ತ ಹೊಸನಗರದ ಸರ್ವ ಧರ್ಮ ಸೌಹಾರ್ದ ಟ್ರಸ್ಟಿನಿಂದ ಶಾಲಾ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿ ವಿತರಣೆ

ಹೊಸನಗರ : ಗಾಂಧಿ ಜಯಂತಿ ಪ್ರಯುಕ್ತ ಪಟ್ಟಣದ ಸರ್ವ ಧರ್ಮ ಸೌಹಾರ್ದ ಟ್ರಸ್ಟ್ (ರಿ)  ವತಿಯಿಂದ ತಾಲ್ಲೂಕಿನ ನಗರ ಹೋಬಳಿಯ ಮತ್ತಿಮನೆ, ಬೈಸೆ ಹಾಗೂ ಸಮಗೋಡು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಪೆನ್ನು, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿ ಇತ್ಯಾದಿಗಳನ್ನು ವಿತರಿಸಲಾಯಿತು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ನಾಗರಕೊಡಿಗೆ ಜಯರಾಮ ಶೆಟ್ಟಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ  ಶೈಕ್ಷಣಿಕವಾಗಿ ಅಗತ್ಯ ಇರುವ ಹಲವು ಪರಿಕರ ನೀಡಿ ಪ್ರೋತ್ಸಾಹ ನೀಡುವುದು ನಮ್ಮ ಟ್ರಸ್ಟಿನ ಮುಖ್ಯ ಗುರಿಯಾಗಿದೆ. ತಾಲ್ಲೂಕಿನ ಒಟ್ಟು 450 ವಿದ್ಯಾರ್ಥಿಗಳು ಈ ಯೋಜನೆಯ ನೆರವು ಪಡೆಯಲಿದ್ದಾರೆ. ಆರಂಭಿಕ ಹಂತವಾಗಿ ನಾಲ್ಕು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಗಾಂಧಿ ಜಯಂತಿ ದಿನಾಚರಣೆಯಂದೇ ಶಿಕ್ಷಣಕ್ಕೆ ಪೂರಕವಾದ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದರು.




ವೇದಿಕೆಯಲ್ಲಿ ಕಾರ್ಯದರ್ಶಿ ಅಶೋಕ್ ಹಾರೆಬೈಲು, ಮಹಿಳಾ ಉಪಾಧ್ಯಕ್ಷೆ ಶೈಲಜಾ, ಸಹಕಾರ್ಯದರ್ಶಿ ಪ್ರಮೀಳಾ,ನಿರ್ದೇಶಕ ವಾಸಪ್ಪ ಸೇರಿದಂತೆ ಶಾಲಾಭಿವೃದ್ದಿ ಸಮಿತಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ