ಹೊಸನಗರದಲ್ಲಿ ದಸರಾ ವಿಶೇಷ - ಅಕ್ಟೋಬರ್ 9ಕ್ಕೆ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳ ಆಯೋಜನೆ
ಹೊಸನಗರ : 2024-25ನೇ ಸಾಲಿನ ದಸರಾ ಪ್ರಯುಕ್ತ ಮಹಿಳೆಯರಿಗಾಗಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಅಕ್ಟೋಬರ್ 9ರ ಬುಧವಾರ ಸ್ಪರ್ಧೆಗಳು ನಡೆಯಲಿದ್ದು, ತೆಂಗಿನಕಾಯಿ ಅಲಂಕಾರ, ಕೃಷ್ಣನ ಕಿರೀಟ ಅಲಂಕಾರ, ಕನ್ನಡಿ ಅಲಂಕಾರ, ಜಡೆ ಮಾಡಿಕೊಂಡು ಬರುವುದು, ಮಕ್ಕಳಿಗೆ ದೇವಿ ಅಲಂಕಾರ, ಪ್ಲಾಸ್ಟಿಕ್ ಶೀಟ್ ಮೇಲೆ ಕುಂದನ್ ಅಲಂಕಾರ, ವೀಳ್ಯದೆಲೆ ಮೇಲೆ ಅಲಂಕಾರ, ಬಾಗಿನ ಸಾಮಾನು ಬಳಸಿ ಆರತಿ ತಟ್ಟೆ ಮಾಡುವುದು, ಸೀಮೆ ಅಕ್ಕಿಯಿಂದ ಖಾದ್ಯ ತಯಾರಿ, ನ್ಯೂಸ್ ಪೇಪರ‍್ರಿನಿಂದ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ತಯಾರಿಕೆ, ತೆಂಗಿನ ಗರಿ ಬಳಸಿ ಜಾನೂರು ಕಲೆ, ಡ್ರೈ ಫ್ರೂಟ್ಸ್ ಬಳಸಿ ಹಾರ ತಯಾರಿಕೆ, 5 ರಿಂದ 10 ವರ್ಷದ ಮಕ್ಕಳಿಗೆ ತರಕಾರಿ, ಹಣ್ಣುಗಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಮಹಿಳೆಯರಿಗೆ ಹೇರ್ ಸ್ಟೈಲ್ ಸ್ಪರ್ಧೆ, ಮಹಿಳೆಯರಿಗೆ ಫ್ಯಾಷನ್ ಶೋ ಏರ್ಪಡಿಸಲಾಗಿದೆ.
ಅಲ್ಲದೆ, ಸ್ಥಳದಲ್ಲೇ ಕಚ್ಚೆ ಸೀರೆ ಉಡುವುದು, ಮ್ಯೂಸಿಕಲ್ ಚೇರ್, ನಿಂಬೆಹಣ್ಣು ಮತ್ತು ಸ್ಪೂನ್ ಆಟ, ಲೋಟದಲ್ಲಿ ಬಾಲ್ ಹಾಕುವುದು, ಹೂ ಕಟ್ಟುವ ಸ್ಪರ್ಧೆ, ಹಣತೆಗೆ ಅಲಂಕಾರ, ಕಾಳು, ಬೇಳೆ, ಅಕ್ಕಿ ಬಳಸಿ ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ, ಹತ್ತಿ ಬಳಸಿ ಗೆಜ್ಜೆವಸ್ತ್ರ ತಯಾರಿಕೆ, ನವಿಲು ಗರಿ ಅಲಂಕಾರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ಸದಸ್ಯೆ ಸಿಂಥಿಯಾ ಸೆರಾವೋ (9353429785) ಹಾಗೂ ಆಶ್ರಯ ಸಮಿತಿ ಸದಸ್ಯೆ ರಾಧಿಕ ಶ್ರೇಷ್ಠಿ (9482477954) ಅವರನ್ನು ಸಂಪರ್ಕಿಸಲು ದಸರಾ ಆಚರಣೆ ಸಮಿತಿ ಕೋರಿದೆ.
ಕಾಮೆಂಟ್‌ಗಳಿಲ್ಲ