ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್ ಅವರಿಗೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ
ಹೊಸನಗರ : ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜ್ ಅವರು ಇಂದು ಸಾಗರ ತಾಲ್ಲೂಕು ಆನಂದಪುರಕ್ಕೆ ತೆರಳುವ ಮಾರ್ಗದಲ್ಲಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡರು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷರು ಪಟ್ಟಣದ ಬಸ್ ನಿಲ್ದಾಣ ಎದುರು ಅದ್ಧೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಯುವ ಮೋರ್ಚಾ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳಾದ ಎನ್. ಆರ್. ದೇವಾನಂದ್, ಎಂ. ಎನ್. ಸುಧಾಕರ್, ಮತ್ತಿಮನೆ ಸುಬ್ರಮಣ್ಯ, ಗಂಡ್ರಳ್ಳಿ ವಿಶ್ವನಾಥ್, ಜಿ. ಎನ್. ಪ್ರವೀಣ, ಮಂಡಾನಿ ಮೋಹನ್, ಬಸವರಾಜ್, ನಗರ ನಿತಿನ್, ಅಬ್ಬಿ ಕಿರಣ್, ಶೋಭರಾಜ್, ಸಂತೋಷ್ ಮಂಡ್ರಿ, ಕಾರ್ತಿಕ್ ಭಂಡಾರಿ, ಸಚಿನ್, ಸುಪ್ರೀತ್, ಕಾರ್ತಿಕ, ಚಂದ್ರು, ಮಹೇಂದ್ರ, ಖಾಸಿಂ, ಸತ್ಯನಾರಾಯಣ, ಸತೀಶ್ ಮೊದಲಾದವರು ಉಪಸ್ಥಿತರಿದ್ದು ಅಭಿನಂದಿಸಿದರು.
ಕಾಮೆಂಟ್‌ಗಳಿಲ್ಲ