Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರಕ್ಕೆ ಕಾಶಿಮಠದ ಶ್ರೀಗಳ ಪಾದುಕಾ ರಥಯಾತ್ರೆ ಆಗಮನ - ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತ ಸಮೂಹ

ಹೊಸನಗರ: ಗೌಡ ಸಾರಸ್ವತ ಸಮಾಜದ ಹರಿದ್ವಾರದಲ್ಲಿನ ಶ್ರೀ ಕಾಶಿಮಠದ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳ್ ಅವರ ಜನ್ಮ ಶತಾಬ್ದಿ ಅಂಗವಾಗಿ ಹಮ್ಮಿಕೊಂಡಿರುವ ಪಾದುಕಾ ದಿಗ್ವಿಜಯ ರಥಯಾತ್ರೆಯು ಇಂದು ಸಂಜೆ ಪಟ್ಟಣ ಪ್ರವೇಶಿಸಿತು.

ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಶ್ರೀಗಳ ಪಾದುಕಾ ರಥಯಾತ್ರೆಯನ್ನು ಪಟ್ಟಣದ ಮಾವಿನಕೊಪ್ಪ ಸರ್ಕಲ್ಲಿನಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಹತ್ತಾರು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡುವ ಮೂಲಕ ರಥಯಾತ್ರೆಯನ್ನು ವಿದ್ಯುಕ್ತವಾಗಿ ಬರಮಾಡಿಕೊಂಡರು.

CLICK ಮಾಡಿ - ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್‌ ಅವರಿಗೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ

ತಾಲ್ಲೂಕು ಗೌಡ ಸಾರಸ್ವತ ಸಮಾಜದ ಅಧ್ಯಕ್ಷ ಡಾ. ಮೋಹನ್ ಶೆಣೈ ಅವರ ಮನೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ, ಸಮಾಜದ ಪರವಾಗಿ ಶ್ರೀಗಳ ಪಾದುಕೆಗೆ ಮೋಹನ್ ಶೆಣೈ ದಂಪತಿಗಳು ವಿಶೇಷ ಪೂಜೆ ನೆರವೇರಿಸಿ ರಥಯಾತ್ರೆ ಯಶಸ್ವಿ ಹಾಗೂ ವಿಶ್ವಶಾಂತಿ ಕುರಿತು ಪ್ರಾರ್ಥಿಸಿದರು.

ಸಮಾಜದ ತಾಲ್ಲೂಕಿನ ಪ್ರಮುಖರಾದ ಎಂ.ಸಿ. ಪ್ರಶಾಂತ್, ಸಂತೋಷ್ ಕಾಮತ್, ಸುದೇಶ್ ಕಾಮತ್, ಪುಂಡಲೀಕ ಶೆಣೈ, ಗೋವಿಂದ ಕಾಮತ್, ದಾಮೋದರ ಶೆಣೈ, ಶ್ರೀಕಾಂತ್ ಕಾಮತ್, ರಾಘವೇಂದ್ರ ಕಾಮತ್, ದಿನೇಶ್ ಶಾನುಭೋಗ್, ಸುಭಾಷ್ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಸದಸ್ಯರು ಹಾಜರಿದ್ದು ವಿಶೇಷ ಭಜನೆ ಹಾಡಿದರು.

ಕಾಮೆಂಟ್‌ಗಳಿಲ್ಲ