ಹೊಸನಗರದ ಶ್ರೀ ರಾಮಕೃಷ್ಣ ಕೃಪಾಪೋಷಿತ ಯಕ್ಷ ವೃಂದದ ಪುಟಾಣಿ ಕಲಾವಿದರಿಂದ ’ಶ್ರೀರಾಮ ದರ್ಶನ - ಮಾರುತಿ ಪ್ರತಾಪ’ ಯಕ್ಷಗಾನ ಯಶಸ್ವಿ ಪ್ರದರ್ಶನ
ಹೊಸನಗರ : ಅಖಿಲ ಭಾರತ ಹಿಂದೂ ಮಹಾ ಸಭಾ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಇಲ್ಲಿನ ಶ್ರೀ ರಾಮಕೃಷ್ಣ ಕೃಪಾಪೋಷಿತ ಯಕ್ಷ ವೃಂದದ ಪುಟಾಣಿಗಳು ಇತ್ತೀಚೆಗೆ ರಂಗಪ್ರವೇಶದೊಂದಿಗೆ ’ಶ್ರೀ ರಾಮ ದರ್ಶನ - ಮಾರುತಿ ಪ್ರತಾಪ’ ಯಕ್ಷಗಾನವನ್ನು ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ಕಲಾಸಕ್ತರ ಮನಸೂರೆಗೊಂಡರು.
ಶ್ರೀ ರಾಮಕೃಷ್ಣ ಕೃಪಾಪೋಷಿತ ಯಕ್ಷ ವೃಂದದ ಪುಟಾಣಿಗಳ ಈ ರಂಗಪ್ರವೇಶಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಶ್ರೀ ರಾಮಕೃಷ್ಣರ ಹೆಸರಿಟ್ಟು ಪ್ರಾರಂಭಿಸಿದ ಪುಟಾಣಿ ಮಕ್ಕಳ ಈ ಯಕ್ಷಗಾನ ವೃಂದ ಉಜ್ವಲವಾಗಿ ಬೆಳಗಿ ಜಗದಗಲ ಖ್ಯಾತಿಯನ್ನು ಗಳಿಸಲಿ. ಯೋಗ ಕೇಂದ್ರ ಮತ್ತು ಯಕ್ಷಗಾನ ವೃಂದದ ಸಂಸ್ಥಾಪಕರಾದ ಸುಧಾಕರ ಅವರು ಭಾರತೀಯ ಸಂಸ್ಕೃತಿಯ ಅನೇಕ ಚಟುವಟಿಕೆಗಳನ್ನು ಅಧ್ಯಾತ್ಮಿಕವಾಗಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚಿಕೊಂಡರು. ಮಕ್ಕಳು ಪ್ರದರ್ಶಿಸಿದ ’ಶ್ರೀ ರಾಮ ದರ್ಶನ - ಮಾರುತಿ ಪ್ರತಾಪ’ ಯಕ್ಷಗಾನ ಪ್ರಸಂಗವನ್ನು ನೋಡಿ ಶ್ರೀಗಳು ಸಂತಸ ಪಟ್ಟರು.
CLICK ಮಾಡಿ - ಕನ್ನಡದಲ್ಲಿ ವೈದ್ಯರ ಔಷಧ ಚೀಟಿ ಎನ್ನುವ ಶುದ್ಧ ಗಿಮಿಕ್ಕು!!
ಮಕ್ಕಳ ಯಕ್ಷವೃಂದದ ರಂಗ ಪ್ರವೇಶದ ಯಕ್ಷಗಾನ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಯೋಗೀಶ್ ಕಾಂಚನ್ ಕೋಡೂರು, ಮದ್ದಳೆ ಶ್ರೀನಿವಾಸ್ ಬಿಲ್ಲೇಶ್ವರ, ಚಂಡೆ ರೋಹಿತ್ ತೀರ್ಥಹಳ್ಳಿ ಪಾಲ್ಗೊಂಡಿದ್ದರು.
ಮುಮ್ಮೇಳದಲ್ಲಿ ಮಾರುತಿಯಾಗಿ 5ನೇ ತರಗತಿಯ ನಿರಂಜನ್ ಸುಧಾಕರ, ಶ್ರೀರಾಮ ಮತ್ತು ಬಲರಾಮನಾಗಿ 6ನೇ ತರಗತಿಯ ಅಭಯ್ ಪಂಡಿತ್, ಬಲರಾಮನ ದೂತನಾಗಿ(ಹಾಸ್ಯ) 1ನೇ ತರಗತಿಯ ನರೇಂದ್ರ ಸುಧಾಕರ, 2ನೇ ಬಲರಾಮನಾಗಿ 6ನೇ ತರಗತಿಯ ದರ್ಶನ ಪ್ರಭು, ಶ್ರೀಕೃಷ್ಣನಾಗಿ 8ನೇ ತರಗತಿಯ ಕುಮಾರಿ ದೀಕ್ಷಾ ಸುರೇಶ್, ಸತ್ಯಭಾಮೆಯಾಗಿ 6ನೇ ತರಗತಿಯ ಧೃತಿ ಸುನೀಲ್, ಸತ್ಯಭಾಮೆಯ ಸಖಿಯಾಗಿ ಹಾಗೂ ಸೀತಾ ಮಾತೆಯಾಗಿ 4ನೇ ತರಗತಿಯ ಕುಮಾರಿ ದೀಕ್ಷಿತ ಕುಮಾರ್ ಪಾತ್ರ ವಹಿಸಿದ್ದರು.
ಹೊಸನಗರ ಪಟ್ಟಣದ ಪಾಲಿಗೆ ಒಂದು ಅಪರೂಪದ ಪ್ರಯತ್ನವಾದ ಮಕ್ಕಳ ಯಕ್ಷವೃಂದದ ಪ್ರಥಮ ಪ್ರದರ್ಶನ ಜನಮೆಚ್ಚುಗೆ ಪಡೆಯಿತು. ಮಕ್ಕಳಿಗೆ ಈ ಕೇಂದ್ರದ ತರಬೇತಿದಾರರಾದ ಹೊಸನಗರದ ಸುಬ್ರಹ್ಮಣ್ಯ ಮುಳುಗಡ್ಡೆ ಇವರು ತರಬೇತಿ ನೀಡಿದ್ದು, ಇವರು ಈಗ ಪಟ್ಲ ಯಕ್ಷ ಫೌಂಡೇಶನ್ನಿನಲ್ಲಿ ಯಕ್ಷಗಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೀಪ ಪ್ರಶಾಂತ್ ವೇದಿಕೆ ಜೋಡಣೆ ಮತ್ತು ಅಲಂಕಾರವನ್ನು ನಿರ್ವಹಿಸಿದರು.
ರಂಗಪ್ರವೇಶದ ಉದ್ಘಾಟನಾ ಸಮಾರಂಭದಲ್ಲಿ ಹೊಸನಗರ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಪ್ರಶಾಂತ್ ಬಿ, ಗೌರವಾಧ್ಯಕ್ಷ ಸುಧೀಂದ್ರ ಪಂಡಿತ್, ಕಾರ್ಯದರ್ಶಿ ವಿನಯಕುಮಾರ್ ಕೆ, ಕೋಡೂರಿನ ಬ್ಲಾಸಮ್ ವಿದ್ಯಾಶಾಲೆಯ ಅಧ್ಯಕ್ಷರಾದ ಬಿ.ಜಿ. ಚಂದ್ರಮೌಳಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಸಂಪೆಕಟ್ಟೆ, ಹೊಸನಗರ ಪಟ್ಟಣ ಪಂಚಾಯತ್ ಸದಸ್ಯ ಸುರೇಂದ್ರ ಕೋಟ್ಯಾನ್, ಬಿಜೆಪಿ ನಾಯಕರಾದ ದೇವಾನಂದ, ಯಕ್ಷಧ್ರುವ ಪಟ್ಲ ಫೌಂಡೇಶನ್ ಜಿಲ್ಲಾ ಸಂಚಾಲಕ ಹಾಗೂ ಪತ್ರಕರ್ತ ನಗರ ರಾಘವೇಂದ್ರ, ಅಮವಾಸ್ಯೆಬೈಲು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು ಹಾಗೂ ಯೋಗ ಕೇಂದ್ರದ ಸಂಚಾಲಕರಾದ ಹೆಚ್.ಎನ್. ತಿಮ್ಮಪ್ಪ, ಕಲ್ಲುಹಳ್ಳ, ಮಲೆನಾಡು ಪ್ರೌಢಶಾಲೆ ಶಿಕ್ಷಕರು, ಯಕ್ಷಗಾನ ವೃಂದದ ಸಂಚಾಲಕರಾದ ವಿ.ಬಿ. ಸತೀಶ್, ಹೊಸನಗರ ನ್ಯಾಯಾಂಗ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ಶ್ರೀ ಮಾತಾ ಭಜನಾ ವೃಂದದ ಸಂಚಾಲಕರಾದ ಸೂರಜ್, ತೀರ್ಥಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಹಾಗೂ ಭಜನಾ ವೃಂದದ ಸಂಚಾಲಕ ಪ್ರಕಾಶ್ ಉಪಸ್ಥಿತರಿದ್ದರು.
ಪ್ರೇಮಾ ಸುಧಾಕರ ಪ್ರಾರ್ಥಿಸಿದರು. ವಿ.ಸುಧಾಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೆಚ್.ಎನ್. ತಿಮ್ಮಪ್ಪ ವಂದಿಸಿದರು. ವಿ.ಬಿ.ಸತೀಶ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ