ಹೊಸನಗರ ಶಾಸಕರ ಮಾದರಿ ಸರ್ಕಾರಿ ಶಾಲೆಗೆ ಕ್ರೀಡಾ ಸಮವಸ್ತ್ರ ದಾನ - ದಾನಿಗಳಿಗೆ ಸನ್ಮಾನ
ಹೊಸನಗರ : ವಿದ್ಯಾರ್ಥಿಗಳ ಮಾನಸಿಕ ಹಾಗೂ ಭೌತಿಕ ವಿಕಸನಕ್ಕೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯವಾಗಿವೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನೇರ್ಲೆ ರಮೇಶ್ ತಿಳಿಸಿದರು.
![]() |
ಹೊಸನಗರದ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಕೊಡುಗೆ ನೀಡಿದ ದಾನಿ ವಸವೆ ಕೃಷ್ಣಮೂರ್ತಿ ಅವರನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನೇರ್ಲೆ ರಮೇಶ್ ಸನ್ಮಾನಿಸಿದ ಕ್ಷಣ |
ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದಾನಿಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಪರಿಸರ ಸೃಷ್ಟಿಗೆ ಕೈಜೋಡಿಸುವ ಮೂಲಕ ಸಹಕರಿಸುವಂತೆ ಕೋರಿದರು.
CLICK ಮಾಡಿ - ಹೊಸನಗರ ಶಾಸಕರ ಮಾದರಿ ಸರ್ಕಾರಿ ಶಾಲೆಯಲ್ಲಿ ಕೃಷ್ಣ ವೇಷ ಸ್ಪರ್ಧೆ
ಸುಮಾರು 84 ಕ್ರೀಡಾ ಸಮವಸ್ತ್ರವನ್ನು ದಾನಿಗಳಾದ ರಾಜೇಶ್ ಕೀಳಂಬಿ, ವಸವೆ ಕೃಷ್ಣಮೂರ್ತಿ, ಕೋಡೂರು ಚಂದ್ರಮೌಳಿ, ಅಮೀರ್ ಹಂಜಾ ಸೇರಿದಂತೆ ವಿವಿಧ ದಾನಿಗಳಿಂದ ಸಂಗ್ರಹಿಸಲಾಯಿತು.
ವೇದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರೋಹಿಣಿ ದೀಪಕ್ ಸ್ವರೂಪ್, ಸದಸ್ಯರಾದ ಶೈಲಜಾ, ಲಕ್ಷ್ಮಿ, ನಾಸಿರ್, ಗೌತಮ, ರಾಘವೇಂದ್ರ, ಪ್ರದೀಪ್, ಪ್ರವೀಣ್, ಚಂದ್ರಶೇಖರ್, ವಿಶಾಲ, ಎಲ್‌ಕೆಜಿ, ಯುಕೆಜಿ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೀಮಾ, ಶಿಕ್ಷಕಿ ತಾರಾ, ಲತಾ ನಾಯಕ್, ಗಾಯತ್ರಿ, ಮಮತ, ಪ್ರಕಾಶ, ರಾಮು, ರಾಜುಶೆಟ್ಟಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ