Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಿಪ್ಪನ್‌ಪೇಟೆ ಮಲ್ಲಾಪುರದಲ್ಲಿ ವಿದ್ಯುತ್ ಹರಿದು ವೃದ್ಧೆ ಸಾವು

ಹೊಸನಗರ : ಇಂದು ಮುಂಜಾನೆ ತನ್ನ ವಾಸದ ಮನೆಯ ಮುಂಭಾಗದ ಉಣಗೋಲು ತೆರೆಯುವ ವೇಳೆ ಏಕಾಏಕಿ ವಿದ್ಯುತ್ ಹರಿದು ವೃದ್ಧೆಯೊಬ್ಬರು ಸಾವಿಗೀಡಾದ ದಾರುಣ ಘಟನೆ ತಾಲ್ಲೂಕಿನ  ಕೆರೆಹಳ್ಳಿ ಹೋಬಳಿಯ ರಿಪ್ಪನ್‌‌ಪೇಟೆ ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಜರುಗಿದೆ. 

ಮಲ್ಲಾಪುರ ನಿವಾಸಿ ಪಾರ್ವತಮ್ಮ (67) ಮೃತ ದುರ್ದೈವಿಯಾಗಿದ್ದಾರೆ.

ತೋಟದ ಪಂಪ್‌‌ಸೆಟ್ ಸಂಪರ್ಕದ ವಿದ್ಯುತ್ ತಂತಿಯನ್ನು ಮನೆಯ ಬೇಲಿಗೆ ಸುತ್ತಿ ಇಟ್ಟಿದ್ದ ಪರಿಣಾಮ ಉಣಗೋಲು ತೆಗೆಯುವ ವೇಳೆ ವಿದ್ಯುತ್ ಹರಿದು ಸ್ಥಳದಲ್ಲೇ ಸಾವು ಕಂಡಿದ್ದಾರೆ.

CLICK ಮಾಡಿ - 6.5 ಲಕ್ಷ ಸಾಲದ ಹೊರೆ - ಆತ್ಮ*ಹತ್ಯೆಗೆ ಶರಣಾದ ನಗರ ಸಮೀಪದ ಮುಂಡಳ್ಳಿ ರೈತ

ಘಟನೆ ನಡೆದ ಸ್ಥಳಕ್ಕೆ ರಿಪ್ಪನ್‌‌ಪೇಟೆ ಪೊಲೀಸ್ ಠಾಣೆಯ ಸಬ್‌‌‌ಇನ್ಸ್‌ಪೆಕ್ಟರ್ ಪ್ರವೀಣ್ ಹಾಗೂ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.


ಕಾಮೆಂಟ್‌ಗಳಿಲ್ಲ