Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಪರಸ್ತ್ರೀಯರ ಸಹವಾಸ - ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪಟಗುಪ್ಪ ಸೇತುವೆ ಮೇಲಿಂದ ಹಾರಿ ಆತ್ಮ*ಹತ್ಯೆ ಮಾಡಿಕೊಂಡ ಕೋಡೂರು ಸುರುಳಿಕೊಪ್ಪದ ಸದಾನಂದ್ ಭಟ್‌‌

ಹೊಸನಗರ : ಇಲ್ಲಿಗೆ ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಸುರುಳಿಕೊಪ್ಪದಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ನಂತರ ಭಯಗೊಂಡು ಪಟಗುಪ್ಪ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ಸುರುಳಿಕೊಪ್ಪ ನಿವಾಸಿ ಸದಾನಂದ್‌ ಭಟ್‌‌. ಪತ್ನಿ ಸಬೀತಾ ನೀಡಿದ ದೂರಿನ ಪ್ರಕಾರ ಪತಿಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೇ ಪತಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮನೆಯಿಂದ ನಾಪತ್ತೆಯಾಗಿರುತ್ತಾರೆ ಎನ್ನಲಾಗಿದೆ.

CLICK ಮಾಡಿ - ಬೇಳೂರು ನಾಗೋಡಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ದೀಪಾ ಅವರಿಗೆ ತಾಲ್ಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿ

ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುರುಳಿಕೊಪ್ಪ ಗ್ರಾಮದ ಸದಾನಂದ್ ಮತ್ತು ಸಬೀತಾ ದಂಪತಿಗಳ ನಡುವೆ ಕಳೆದ 12 ವರ್ಷಗಳಿಂದ ಪ್ರತಿ ನಿತ್ಯ ಜಗಳ ನಡೆಯುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಒಂದೇ ಮನೆಯಲ್ಲಿ ಇಬ್ಬರೂ ವಾಸವಾಗಿದ್ದರೂ ಕೂಡಾ ಪ್ರತ್ಯೇಕವಾಗಿ ಅಡಿಗೆ ಮಾಡಿಕೊಂಡು ಜೀವಿಸುತ್ತಿದ್ದರು. ದಂಪತಿಗಳಿಗೆ ಸುರುಳಿಕೊಪ್ಪದಲ್ಲಿ ನಾಲ್ಕು ಎಕರೆಯಷ್ಟು ಅಡಿಕೆ ಮತ್ತು ತೆಂಗಿನ ತೋಟವಿದ್ದು ಅದರ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಸದಾನಂದ್ ಕಳೆದ 12 ವರ್ಷಗಳಿಂದಲೂ ಬೇರೆ ಬೇರೆ ಹೆಣ್ಣುಮಕ್ಕಳ ಸಹವಾಸ ಮಾಡುತ್ತಿದ್ದು, ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಷಯವಾಗಿ 4ನೇ ತಾರೀಖಿನಂದು ಸಂಜೆ 5 ಗಂಟೆ ಸುಮಾರಿಗೆ ಪತಿ ಮೊಬೈಲಿನಲ್ಲಿ ಕಾಂಟ್ಯಾಕ್ಟ್‌ ಆಗಿದ್ದ ಹುಡುಗಿಯೊಬ್ಬಳ ವಿಷಯ ಪತ್ನಿಯ ಗಮನಕ್ಕೆ ಬಂದಿದ್ದು, ಈ ವಿಷಯವಾಗಿ ಪತ್ನಿ ಸದಾನಂದ್ ಅವರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಗಲಾಟೆ ನಡೆದು ಪತಿ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರವಾದ ಪೆಟ್ಟಾದ ಕಾರಣ ಪತ್ನಿ ಸಬೀತಾ ಮೂರ್ಛೆ ಹೋಗಿದ್ದಾರೆ.

ಮಾರನೇಯ ದಿನ 5ನೇ ತಾರೀಖಿನಂದು ಬೆಳಿಗ್ಗೆ ಸಬೀತಾರವರ ಚಿಕ್ಕಪ್ಪನ ಮಗ ಮನೆಗೆ ಬಂದಾಗ ಸಬೀತಾ ಮೂರ್ಛೆ ಹೋಗಿದ್ದನ್ನು ಕಂಡು ಕೂಡಲೇ ಅಂಬುಲೆನ್ಸ್ ಮೂಲಕ ಹೊಸನಗರ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

CLICK ಮಾಡಿ -12 ವರ್ಷದ ಹಿಂದೆ ನಾಪತ್ತೆಯಾದ ಮಾರುತೀಪುರದ ಶಿವಪ್ಪ ಗೌಡ - ಗಂಡನನ್ನು ಹುಡುಕಿಕೊಡುವಂತೆ ಹೊಸನಗರ ಪೊಲೀಸರಿಗೆ ಈಗ ದೂರು ಕೊಟ್ಟ ಪತ್ನಿ!!

ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ನಂತರ ಹೆದರಿಕೊಂಡ ಪತಿ ಸದಾನಂದ್ ಭಟ್ ಮನೆಯಿಂದ ನಾಪತ್ತೆಯಾಗಿದ್ದಾರೆ. ಪತ್ನಿಗೆ ಎಚ್ಚರಾದ ಬಳಿಕ ರಿಪ್ಪನ್‌ಪೇಟೆ ಠಾಣೆಗೆ ದೂರು ನೀಡಲಾಗಿದ್ದು, ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಆರೋಪಿ ಸದಾನಂದ ಅವರಿಗೆ ಶೋಧ ನಡೆಸಿದ್ದಾರೆ. ಆರೋಪಿಯ ಕಾರು ಇಲ್ಲಿನ ಪಟಗುಪ್ಪ ಸೇತುವೆ ಬಳಿ ದೊರಕಿದ್ದು ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕಾರನ್ನು ಹೊಸನಗರ ಪೊಲೀಸರ ವಶಕ್ಕೆ ನೀಡಲಾಗಿತ್ತು.

ಪಟಗುಪ್ಪ ಹೊಳೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಇಂದು ಬೆಳಿಗ್ಗೆ ಆರೋಪಿ ಸದಾನಂದ ಮೃತ ದೇಹ ಪಟಗುಪ್ಪ ಸೇತುವೆ ಬಳಿಯಲ್ಲಿ ಪತ್ತೆಯಾಗಿದೆ. ಪತ್ನಿ ಮೇಲೆ ಹಲ್ಲೆ ನಡೆಸಿದ ನಂತರ ಹೆದರಿಕೆಯಿಂದ ಸದಾನಂದ ಪಟಗುಪ್ಪ ಸೇತುವೆ ಬಳಿ ಹೋಗಿ ತಮ್ಮ ಕಾರು ನಿಲ್ಲಿಸಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಹಾಗೂ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ