Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

12 ವರ್ಷದ ಹಿಂದೆ ನಾಪತ್ತೆಯಾದ ಮಾರುತೀಪುರದ ಶಿವಪ್ಪ ಗೌಡ - ಗಂಡನನ್ನು ಹುಡುಕಿಕೊಡುವಂತೆ ಹೊಸನಗರ ಪೊಲೀಸರಿಗೆ ಈಗ ದೂರು ಕೊಟ್ಟ ಪತ್ನಿ!!

ಹೊಸನಗರ : ಒಂದಲ್ಲ ಎರಡಲ್ಲ ಬರೋಬ್ಬರಿ 12 ವರ್ಷ ಗಂಡನಿಗೆ ಕಾದು, ಕೊನೆಗೂ ಆತ ಮನೆಗೆ ಬಾರದೇ ಇರುವುದರಿಂದ ’ನನ್ನ ಗಂಡನನ್ನು ಹುಡುಕಿಕೊಡಿ’ ಎಂದು ಮಹಿಳೆಯೊಬ್ಬರು ಈಗ ಹೊಸನಗರ ಪೊಲೀಸ್‌ ಠಾಣೆಯ ಮೆ‌ಟ್ಟಿಲೇರಿದ್ದಾರೆ!

ತಾಲ್ಲೂಕಿನ ಮಾರುತೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣಜಿ ಗ್ರಾಮದ ಹೊಸ ಮನೆಯ ವಾಸಿ ಶ್ರೀಮತಿ ರತ್ನಮ್ಮ ಎನ್ನುವವರೇ ತಮ್ಮ ಪತಿಯನ್ನು ಹುಡುಕಿಕೊಡುವಂತೆ ಹೊಸನಗರ ಪೊಲೀಸ್ ಠಾಣೆಗೆ ದೂರು ಕೊಟ್ಟವರು. ಇವರ ಪತಿ ಶಿವಪ್ಪ ಗೌಡ. ಕಾಣೆಯಾಗುವಾಗ ಅವರಿಗೆ 57 ವರ್ಷ ವಯಸ್ಸಾಗಿದ್ದು ಈಗ 69 ವರ್ಷವಾಗಿದೆ ಎಂದು ದೂರಿನಲ್ಲಿ ತಿಳಿಸಿರುವ ರತ್ನಮ್ಮ, ಇಷ್ಟು ವರ್ಷ ಗಂಡನನ್ನು ಹುಡುಕದೇ ಇರಲು ಕಾರಣವನ್ನೂ ದೂರಿನಲ್ಲಿ ವಿವರಿಸಿದ್ದಾರೆ. 

CLICK ಮಾಡಿ - ಹೊಸನಗರದ ಹಿರಿಯ ನಾಗರೀಕರ ಗಮನಕ್ಕೆ... ಸೆಪ್ಟೆಂಬರ್‌ 5ರಂದು ಶಿವಮೊಗ್ಗದಲ್ಲಿ ಹಿರಿಯ ನಾಗರೀಕರಿಗಾಗಿ ನಡೆಯಲಿದೆ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಮಾನಸಿಕವಾಗಿ ದುರ್ಬಲವಾಗಿದ್ದ, ಜೊತೆಗೆ ಕುಡಿತದ ಚಟವನ್ನೂ ಹೊಂದಿದ್ದ ಶಿವಪ್ಪಗೌಡ ಆಗಾಗ ಮನೆ ಬಿಟ್ಟು ಹೋಗುತ್ತಿದ್ದರಂತೆ. ಹೀಗೆ ಮೂರ‍್ನಾಲ್ಕು ಬಾರಿ ಮನೆ ಬಿಟ್ಟು ಹೋಗಿದ್ದು ಶಿವಪ್ಪಗೌಡ ಕೆಲವೊಮ್ಮೆ ಎರಡು ಮೂರು ವರ್ಷಗಳ ನಂತರ ಮನೆಗೆ ಹಿಂದಿರುಗುತ್ತಿದ್ದರಂತೆ. ಆದ್ದರಿಂದ ರತ್ನಮ್ಮ ಸೇರಿದಂತೆ ಮನೆಯವರಿಗೆ ಇದು ಅಭ್ಯಾಸವಾಗಿ ಹೋಗಿತ್ತು. ಇದೇ ರೀತಿ 2012ರ ಜನವರಿ 20ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಹೋದವರು ವಾಪಾಸ್ಸು ಬಂದೇ ಇಲ್ಲ. ಇವತ್ತಲ್ಲ ನಾಳೆ ಬರಬಹುದು ಎಂದು ಮನೆಯವರೂ ಕಾದಿದ್ದಾರೆ. ಒಂದು ವರ್ಷ ಕಳೆದಿದೆ, ಎರಡು ವರ್ಷವೂ ಆಗಿದೆ. ಆದರೂ ಶಿವಪ್ಪ ಗೌಡರ ಸುಳಿವಿಲ್ಲ. ಕೊನೆಗೆ ಹನ್ನೆರಡು ವರ್ಷ ಕಾದ ರತ್ನಮ್ಮ ಈಗ ಕಳೆದು ಹೋಗಿರುವ ನನ್ನ ಪತಿಯನ್ನು ಹುಡುಕಿಕೊಡಿ ಎಂದು ಅವರ ಭಾವಚಿತ್ರದೊಂದಿಗೆ ದೈಹಿಕ ಚಹರೆಯನ್ನು ವಿವರಿಸಿ ಹೊಸನಗರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಈ ಸಂಬಂಧ ಈಗ ಹೊಸನಗರ ಪೊಲೀಸ್‌‌ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕ್ರಮ ಕೈಗೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ