Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕಾಳಿಕಾಪುರದ ಶ್ರೀ ಗಜಾನನ ಯುವಕ ಸೇವಾ ಸಮಿತಿ ಪದಾಧಿಕಾರಿಗಳಿಗೆ ಬೇಳೂರು 'ಟೀ ಶರ್ಟ್' ವಿತರಣೆ

ಹೊಸನಗರ : ಯಾವುದೇ ಸಂಘಟನೆಗಳ ಪದಾಧಿಕಾರಿಗಳು ಸಮವಸ್ತ್ರ ಧರಿಸುವುದು ಸಂಘಟನೆಯ ಒಗ್ಗಟನ್ನು ಪ್ರದರ್ಶಿಸುತ್ತದೆ ಎಂದು ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಕ್ಷತಾ ನಾಗರಾಜ್ ಅಭಿಪ್ರಾಯಪಟ್ಟರು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಇಲ್ಲಿನ ಹೆಬೈಲು ಸರ್ಕಲ್ಲಿನಲ್ಲಿ ಕಾಳಿಕಾಪುರದ ಶ್ರೀ ಗಜಾನನ ಯುವಕ ಸೇವಾ ಸಮಿತಿ ಆಯೋಜಿಸಿರುವ 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಪದಾಧಿಕಾರಿಗಳಿಗೆ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೊಡುಗೆಯಾಗಿ ನೀಡಿದ್ದ 'ಟೀ ಶರ್ಟ್'ನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಕಳೆದ 3 ವರ್ಷಗಳಿಂದೀಚೆಗೆ ಸಮಿತಿಯು ಅದ್ಧೂರಿ ಗಣೇಶೋತ್ಸವ ನಡೆಸಲು ಮುಂದಾಗಿದೆ. ಸಂಘಟನೆಯ ಸಂಕೇತವಾದ ಈ ನಾಡಹಬ್ಬಕ್ಕೆ ಸಾರ್ವಜನಿಕರು ನೆರವು ನೀಡುವ ಮೂಲಕ ಕೈ ಜೋಡಿಸುವಂತೆ ಅವರು ಕರೆ ನೀಡಿದರು.

CLICK ಮಾಡಿ - ಪರಸ್ತ್ರೀಯರ ಸಹವಾಸ - ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪಟಗುಪ್ಪ ಸೇತುವೆ ಮೇಲಿಂದ ಹಾರಿ ಆತ್ಮ*ಹತ್ಯೆ ಮಾಡಿಕೊಂಡ ಕೋಡೂರು ಸುರುಳಿಕೊಪ್ಪದ ಸದಾನಂದ್ ಭಟ್‌‌

ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಮೂರು ದಿನಗಳ ಈ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆ, ವಿವಿಧ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದ ಜಂಬಳ್ಳಿ ಮಾಧವಶೆಟ್ಟಿ, ಸಮಿತಿಯ ಕಾರ್ಯದರ್ಶಿ ವಿವೇಕ್, ಖಜಾಂಚಿ ನಾಗರಾಜ್, ಅಭಿಷೇಕ್, ಆದಿತ್ಯ, ಅಕ್ಷಯ್, ಗಣೇಶ, ಶಿವಕುಮಾರ್, ಜೋಯಲ್ ಬಾಂಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ