ಹೊಸನಗರ ಕೊಡಚಾದ್ರಿ ಕಾಲೇಜಿನಲ್ಲಿ ಗಾಂಧಿ ಜಯಂತಿ ಪೂರ್ವಭಾವಿಯಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಹೊಸನಗರ : ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣ ಮತ್ತು ಕಾಲೇಜಿನಿಂದ ಮಾವಿನಕೊಪ್ಪ ವೃತ್ತದವರೆಗೆ ಕಾಲೇಜಿನ ಎನ್ಎಸ್ಎಸ್ ಘಟಕದ ಸುಮಾರು 150ಕ್ಕೂ ಹೆಚ್ಚು ಸ್ವಯಂಸೇವಕ ವಿದ್ಯಾರ್ಥಿಗಳು ರಸ್ತೆ ಬದಿ ಹಾಗೂ ಕಾಲೇಜ್ ಆವರಣದಲ್ಲಿದ್ದ ಸುಮಾರು 5 ಕ್ವಿಂಟಾಲ್ಲಿನಷ್ಟು ತ್ಯಾಜ್ಯವನ್ನು ಸಂಗ್ರಹಿಸಿ ಎಂ. ಗುಡ್ಡೇಕೊಪ್ಪ ಪಂಚಾಯಿತಿ ಸಹಯೋಗದೊಂದಿಗೆ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹಸ್ತಾಂತರಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಉಮೇಶ್, ಉಪನ್ಯಾಸಕರುಗಳಾದ ಡಾ. ಶ್ರೀಪತಿ ಹಳಗುಂದ, ಡಾ. ಪ್ರಭಾಕರ, ಬಸವರಾಜಪ್ಪ, ಪ್ರದೀಪ್, ರವಿ ಮೊದಲಾದವರು ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ನಾವು ನಮ್ಮ ಪರಿಸರ ಸ್ವಚ್ಛವಾಗಿದ್ದಾಗ ಮಾತ್ರ ದೇಶವನ್ನು ಸ್ವಚ್ಛಗೊಳಿಸಬಹುದು. ಸ್ವಚ್ಛತೆಯೇ ಸೇವೆ ಎಂಬ ಪದನುಡಿ ಅನುಷ್ಠಾನಗೊಳಿಸುವಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾಮೆಂಟ್‌ಗಳಿಲ್ಲ