Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಳೆಗೆ ಕುಸಿದ ನಿಟ್ಟೂರು ಸರ್ಕಾರಿ ಶಾಲೆ ಕಾಂಪೌಂಡ್‌ ವೀಕ್ಷಣೆ ಮಾಡಿದ ಶಾಸಕರ ಆಪ್ತ ಸಹಾಯಕ - ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಣೆ

ಹೊಸನಗರ: ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ ಮೇರೆಗೆ ಇಂದು ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಇತ್ತೀಚಿನ ಭಾರೀ ಮಳೆಗೆ ಕುಸಿತ ಕಂಡಿದ್ದ ತಾಲ್ಲೂಕಿನ ನಗರ ಹೋಬಳಿ ನಿಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡಿನ ಸ್ಥಿತಿಯನ್ನು ಅವಲೋಕಿಸಿದರು. ಶಾಸಕರ ಗಮನ ಸೆಳೆದು ಕೂಡಲೇ ದುರಸ್ತಿ ಕಾರ್ಯಕ್ಕೆ ಸೂಕ್ತ ಅನುದಾನ ಕೊಡಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ಪರವಾಗಿ ಸುಮಾರು ಎಪ್ಪತ್ತು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿದರೆ, ಸರ್ಕಾರದ ವತಿಯಿಂದ ಶೂ ಭಾಗ್ಯ ಕಲ್ಪಿಸಲಾಗಿತ್ತು.

CLICK ಮಾಡಿ - ಲಯನ್ಸ್ ಕ್ಲಬ್ ಹೊಸನಗರ ಶಾಖೆಯ ನೂತನ ಅಧ್ಯಕ್ಷರಾಗಿ ದೀಪಕ್ ಸ್ವರೂಪ್ ಆಯ್ಕೆ

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ್, ಸದಸ್ಯೆ ಶೋಭಾ ಉದಯ್, ಮುಖ್ಯ ಶಿಕ್ಷಕ ಸತೀಶ್ ಸೇರಿದಂತೆ ಶಾಲಾಭಿವೃದ್ದಿ ಸಮಿತಿಯ ಹಲವು ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ