Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಶ್ರೀ ರಾಮ್ ಫೈನಾನ್ಸ್‌ನ ಶಾಖೆ ಆರಂಭ - ಚಿನ್ನ ವಾಹನ ಸೇರಿದಂತೆ ಎಲ್ಲಾ ರೀತಿಯ ಹಣಕಾಸು ಸೌಲಭ್ಯ ಲಭ್ಯ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ

ಹೊಸನಗರ : ಪಟ್ಟಣದ ರಾಮ ಕಾಂಪ್ಲೆಕ್ಸ್ ಪಕ್ಕದ ನೂತನ ಕಟ್ಟಡದಲ್ಲಿ ಚೆನ್ನೈ ಮೂಲದ ಶ್ರೀರಾಮ್ ಫೈನಾನ್ಸ್ ಹೊಸ ಶಾಖೆಯನ್ನು ಮಂಗಳೂರು ಶಾಖೆಯ ಜೋನಲ್ ಬಿಜಿನೆಸ್ ಮುಖ್ಯಸ್ಥರಾದ ಶರತ್ ಚಂದ್ರ ಕೆ. ಭಟ್ ಅವರು ಉದ್ಘಾಟಿಸಿದರು. 

ಉದ್ಘಾಟನೆಯ ನಂತರ ಅವರು, ನಾವು ಈ ಹಿಂದೆ ಉಪ ಶಾಖೆಯನ್ನು ಪ್ರಾರಂಭಿಸಿ ಗ್ರಾಹಕರನ್ನು ಹೊಂದಿದ್ದು ಇದೀಗ ಪೂರ್ಣಪ್ರಮಾಣದ ಶಾಖೆಯನ್ನು ಹೊಂದಿ ಗ್ರಾಹಕರಿಗೆ ಚಿನ್ನ ಸೇರಿದಂತೆ ಎಲ್ಲ ರೀತಿಯ ಹಣಕಾಸಿನ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಿದ್ದೇವೆ. ಆದ್ದರಿಂದ ಗ್ರಾಹಕರು ಶಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ 750 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡಿದ್ದಲ್ಲದೇ, ಹೊಸನಗರದ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು ಅವರುಗಳಿಗೆ ಸ್ಕಾಲರ್‌ಶಿಪ್‌ ಪ್ರಮಾಣ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಜೋನಲ್‌ ಕಲೆಕ್ಷನ್ ಮುಖ್ಯಸ್ಥ ಬಿ. ನಾಗರಾಜ್, ವ್ಯಾಪಾರ ವಿಭಾಗದ ಮುಖ್ಯಸ್ಥ ಸದಾಶಿವ ಪೂಜಾರಿ, ಶಿವಮೊಗ್ಗ ವಿಭಾಗದ ಕಲೆಕ್ಷನ್ ಮುಖ್ಯಸ್ಥ ಎಂ. ಆರ್. ಯೋಗೇಶ್, ಹೊಸನಗರ ಶಾಖೆ ಶಾಖಾಧಿಕಾರಿ ಶ್ರೀಕಾಂತ್, ಕಲೆಕ್ಷನ್ ಮ್ಯಾನೇಜರ್ ಸಂಜಯ್ ಮೊದಲಾದವರು ಉಪಸ್ಥಿತರಿದ್ದರು. 

ಶಿವಮೊಗ್ಗ ಶಾಖೆಯ ರೀಜನಲ್ ಬಿಜಿನೆಸ್ ಮುಖ್ಯಸ್ಥ  ಜಾರ್ಜ್‌ ಡಿಸೋಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ