Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಲಯನ್ಸ್ ಕ್ಲಬ್ ಹೊಸನಗರ ಶಾಖೆಯ ನೂತನ ಅಧ್ಯಕ್ಷರಾಗಿ ದೀಪಕ್ ಸ್ವರೂಪ್ ಆಯ್ಕೆ

ಹೊಸನಗರ : ವಿಶ್ವದ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್‌ನ ಹೊಸನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಟ್ಟಣದ ಸ್ನೇಹ ಸ್ಟುಡಿಯೋ ಮಾಲೀಕ ಲ॥ ದೀಪಕ್ ಸ್ವರೂಪ್ ಅವಿರೋಧ ಆಯ್ಕೆಯಾದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಥಮ ಉಪ ಜಿಲ್ಲಾ ರಾಜ್ಯಪಾಲ-317ಸಿ ಪದಗ್ರಹಣಾಧಿಕಾರಿ ಪಿಎಂಜೆಎಫ್ ಲ॥ ಸಪ್ನ ಸುರೇಶ್ ಅವರಿಂದ ಅಧಿಕಾರ ದಂಡ ಸ್ವೀಕರಿಸುವ ಮೂಲಕ ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿಯಾಗಿ ಗರ್ತಿಕೆರೆ  ಲ॥ ಬಿ.ರಾಜು ಹಾಗೂ ಖಜಾಂಚಿಯಾಗಿ ದಂತವೈದ್ಯ ಲ॥ ಡಾ. ಪ್ರವೀಣ್ ನೇಮಕಗೊಂಡರು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ ಪಿಡಿಎಫ್‌ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ನಂತರ ಪದಗ್ರಹಣಾಧಿಕಾರಿ ಪಿಎಂಜೆಎಫ್ ಲ॥ ಸಪ್ನ ಸುರೇಶ್ ಮಾತನಾಡಿ,  ರಕ್ತದಾನ ಶಿಬಿರ, ನೇತ್ರ ಚಿಕಿತ್ಸೆ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಿಂದ ಜನಮನ್ನಣೆ ಪಡೆದ ಸಂಸ್ಥೆಯು ಗ್ರಾಮೀಣಾಭಿವೃದ್ದಿ, ನೈರ್ಮಲ್ಯ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ಮುಂದೆಯೂ ನೂತನ ಆಡಳಿತ ಸಮಿತಿ ಈ ಕುರಿತು ಕಾರ್ಯೋನ್ಮುಖವಾಗಲಿ ಎಂದು ಶುಭ ಹಾರೈಸಿದರು. 

ಇದೇ ವೇಳೆ ದಶಕಗಳಿಗೂ ಹೆಚ್ಚು ಕಾಲ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ ಕಾರಣಗಿರಿ ಕೆರೆಹೊಂಡದ ಮಾಜಿ ಸೈನಿಕ ಕೆ.ಜಿ. ಚರಣ್ ಅವರನ್ನು ಸಂಸ್ಥೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಹೊಂದಿದ ಸಹಾಯಕ ಕಾರ್ಯಪಾಲಕ ಅಭಿಯಂತರ, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಲ॥ ಮಲ್ಲಿಕಾರ್ಜುನ ದಂಪತಿ ಅವರನ್ನು ಸನ್ಮಾನಿಸಲಾಯಿತು.

VIDEO - ಇಂದು ಬೆಳಿಗ್ಗೆ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಟ್ಟ ಕ್ಷಣಗಳು...

ಸಮಾರಂಭದಲ್ಲಿ ಹಿರಿಯರಾದ ಲ॥ ರಾಮನ್ ಉಡುಪ, ಶೀಲಾ ರಾಮನ್, ಡಾ. ಕವಿತಾ ಪ್ರವೀಣ್, ಕೋಣಂದೂರಿನ ಲಲಿತಾಂಬಿಕ ಮೆಡಿಕಲ್ಸ್ ಮಾಲೀಕ ಲ॥ ಎಂ.ಬಿ. ರಘುನಾಥ್, ಲ॥ ದಿವಾಕರ ಶೆಟ್ಟಿ, ಲ॥ ದುಮ್ಮ ವಿನಯಗೌಡ, ಮುಂಬಾರು ಲ॥ ಕುಮಾರಗೌಡ, ಮುತ್ತೂರು ಲ॥ ಗಣರಾಜ, ಲ॥ ಎಂ.ಕೆ. ರಾಜೇಶ್‌ಗೌಡ, ಲ॥ ಎಂ.ಎನ್. ಸುಧಾಕರ, ಗರ್ತಿಕೆರೆ ಲ॥ ಸತ್ಯನಾರಾಯಣ, ಮಾಸ್ತಿಕಟ್ಟೆ ವರಾಹಿ ಕ್ಲಬಿನ ಲ॥ ವಿದ್ಯಾನಂದ ರಾವ್, ಲ॥ ಡಾ. ಲಿಂಗರಾಜ್, ಜೆಸಿಐ ಡೈಮಂಡ್ ಅಧ್ಯಕ್ಷ ಅರವಿಂದ್, ಡಾ. ಹೇಮಂತ್ ಹಾಗೂ ಕೋಣಂದೂರಿನ ಶರಾವತಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ