ಹೊಸನಗರ ತಾಲ್ಲೂಕಿನೆಲ್ಲೆಡೆ ಅಬ್ಬರ ಮುಗಿಸಿದ ಪುಷ್ಯ, ನಾಳೆಯಿಂದ ಆಶ್ಲೇಷ ಮಳೆ - ಹುಲಿಕಲ್ಲಿನಲ್ಲಿ 171. 2 ಮಿಲಿಮೀಟರ್ ಮಳೆ
ಹೊಸನಗರ : ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಹುಲಿಕಲ್ಲಿನಲ್ಲಿ 171. 2 ಮಿಲಿಮೀಟರ್ ಮಳೆಯಾಗಿದೆ.
VIDEO - ಇಂದು ಬೆಳಿಗ್ಗೆ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಟ್ಟ ಕ್ಷಣಗಳು...
ಮಾಸ್ತಿಕಟ್ಟೆಯಲ್ಲಿ 160 ಎಂಎಂ, ಯಡೂರಿನಲ್ಲಿ 123 ಎಂಎಂ, ಮಾಣಿಯಲ್ಲಿ 107 ಎಂಎಂ, ಚಕ್ರಾ ನಗರದಲ್ಲಿ 75 ಎಂಎಂ, ಕಾರ್ಗಲ್ಲಿನಲ್ಲಿ 70.6 ಎಂಎಂ, ಸಾವೇಹಕ್ಕಲಿನಲ್ಲಿ 66 ಎಂಎಂ, ರಿಪ್ಪನ್‌ಪೇಟೆಯಲ್ಲಿ 43.2 ಎಂಎಂ, ಹೊಸನಗರ ಪಟ್ಟಣದಲ್ಲಿ 24.2 ಎಂಎಂ, ಹೊಂಬುಜದಲ್ಲಿ 21 ಎಂಎಂ, ಅರಸಾಳಿನಲ್ಲಿ 12.8 ಎಂಎಂ ಮಳೆ ದಾಖಲಾಗಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಇವತ್ತಿನವರೆಗೆ ತಾಲ್ಲೂಕಿನೆಲ್ಲೆಡೆ ಅಬ್ಬರದಿಂದ ಸುರಿದು ಹಲವು ಅನಾಹುತಗಳನ್ನು ಸೃಷ್ಟಿ ಮಾಡಿದ ಪುಷ್ಯ ಮಳೆ ಇಂದು ಕೊನೆಗೊಳ್ಳಲಿದ್ದು, ನಾಳೆಯಿಂದ ಆಶ್ಲೇಷ ಮಳೆ ಪ್ರಾರಂಭವಾಗಲಿದೆ.
ಕಾಮೆಂಟ್‌ಗಳಿಲ್ಲ