Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಯಿಂದ ಕಲ್ಲುಹಳ್ಳ ಸೇತುವೆ ಬಳಿ ಶರಾವತಿಗೆ ಬಾಗಿನ - ತಹಶೀಲ್ದಾರ್‌ ಹಾಗೂ ಸಿಪಿಐ ಭಾಗಿ

ಹೊಸನಗರ : ತಾಲ್ಲೂಕಿನೆಲ್ಲೆಡೆ ನಿರಂತರವಾಗಿ ಸುರಿದ ವರ್ಷಧಾರೆಯಿಂದಾಗಿ ಶರಾವತಿ ಮೈದುಂಬಿ ಹರಿಯುತ್ತಿದ್ದಾಳೆ. ನಾಡಿನ ಜನಕ್ಕೆ ಸುಖ ಸಮೃದ್ಧಿ, ನೆಮ್ಮದಿ ತರುವ ಶರಾವತಿ ನದಿಗೆ ಪಟ್ಟಣದ ಸಮೀಪದಲ್ಲಿರುವ ಕಲ್ಲುಹಳ್ಳದಲ್ಲಿ ಇಂದು ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಯಿಂದ ಬಾಗಿನ ಅರ್ಪಿಸಲಾಯಿತು. ತಹಶೀಲ್ದಾರ್ ರಶ್ಮಿ ಹೆಚ್‌.ಜೆ, ಸಿಪಿಐ ಗುರಣ್ಣ ಹೆಬ್ಬಾಳ್‌, ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಯ ಜೆಸಿ ವಿನಯ್ ಹೆಬ್ಬೈಲು, ಜೆಎಸಿ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿ ಸೆನೆಟರ್‌‌ ಕೆ.ಆರ್‌. ಪ್ರದೀಪ್‌ ಶರಾವತಿ ನದಿಗೆ ಬಾಗಿನ ಅರ್ಪಿಸಿ, ತಾಲ್ಲೂಕಿನ ಜನರು ಸೇರಿದಂತೆ ನಾಡಿನ ಜನರೆಲ್ಲರಿಗೂ ಸುಖ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪಿಜಡ್‌ಪಿ ಬಿ.ಎಸ್‌. ಸುರೇಶ್, ಪಿಜಡ್‌ವಿಸಿ ಜೆಸಿ ಪೂರ್ಣೇಶ್ ಮಲೇಬೈಲ್, ಕಾರ್ಯದರ್ಶಿ ಜೆಸಿ ಮಂಜುನಾಥ್ ಶೆಟ್ಟಿ, ಜೆಸಿ ಕೇಶವ್, ಜೆಸಿ ರಾಧಾಕೃಷ್ಣ, ಜೆಸಿ ನಾಗರಾಜ್ ವಿ.ಡಿ, ಜೆಸಿ ಯೋಗರಾಜ್, ಜೆಎಂಎಫ್‌ ಸುಜಾತಾ ಸುರೇಶ್, ಜೆಸಿ ಶೈಲಾ ಕೇಶವ್, ಜೆಸಿ ಸುಶೀಲಾ, ಜೆಸಿ ರಾಧಿಕಾ, ಜೆಸಿ ಮಂಜು, ಜೆಸಿ ದಿವ್ಯಾ, ಪ್ರಮೋದ್, ಪ್ರಕಾಶ್, ಅನು, ಸಂಗೀತಾ, ಜಾಗೃತಿ, ಅಶೋಕ್ ಮೊದಲಾದವರು ಜೊತೆಗಿದ್ದರು.

ಕಾಮೆಂಟ್‌ಗಳಿಲ್ಲ