ಹೊಸನಗರ ಪಟ್ಟಣದೆಲ್ಲೆಡೆ ಸಡಗರ ಸಂಭ್ರಮದ ಸ್ವಾತಂತ್ರ‍್ಯೋತ್ಸವ
ಹೊಸನಗರ : ಪಟ್ಟಣದ ಪೊಲೀಸ್ ಠಾಣೆ, ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ, ಮಲೆನಾಡು ಪ್ರೌಢಶಾಲೆ, ಜೆಎಂಎಫ್‌ಸಿ ನ್ಯಾಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೆಇಬಿ ವೃತ್ತದಲ್ಲಿ ಯುವರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಮಿತ್ರಕೂಟ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳವರು ಇಂದು 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದರು.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಪಟ್ಟಣದ ಅಂಚೆ ಕಚೇರಿಯಲ್ಲಿ ಹಿರಿಯರಾದ ನಾಗೇಶ್ ರಾವ್‌ರವರು ದ್ವಜಾರೋಹಣ ನೆರವೇರಿಸಿದರು.
ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮಸೀದಿ ಅಧ್ಯಕ್ಷರಾದ ಕೆ.ಅಮಾನುಲ್ಲ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಅದ್ಧೂರಿಯಾಗಿ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಲಾಯಿತು.
ಮಸೀದಿಯ ಧರ್ಮಗುರುಗಳಾದ ಬದುರುದ್ದೀನ್ ಜೋಹರಿಯವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರೀತಿ, ಸೌಹಾರ್ದ, ಸಹಿಷ್ಣುತೆ, ದೇಶಪ್ರೇಮ ಈ ಮಣ್ಣಿನ ಭಾಗವಾಗಿದ್ದು, ಪೈಗಂಬರರ ಹಿಂಬಾಲಕರಾದ ನಾವು ವಾಸಿಸುವ ಪ್ರದೇಶದಲ್ಲಿರುವ ಜನರನ್ನು ಪ್ರೀತಿಸುವುದರೊಂದಿಗೆ ದೇಶಪ್ರೇಮ ನಮ್ಮದಾಗಬೇಕು. ಭವಿಷ್ಯದ ಯುವಸಮೂಹಕ್ಕೆ ನಾವು ಬದುಕುವ ರೀತಿ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.
ಸ್ವಾತಂತ್ರ‍್ಯೋತ್ಸವದ ವಿಶೇಷವಾಗಿ ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶುಶ್ರೂಷಕಿ ಶೈಲಜಾ ಹಾಗೂ ಆಶಾ ಕಾರ್ಯಕರ್ತೆ ಸವಿತಾ ಅವರನ್ನು ಜಮಾತ್ ಬಾಂಧವರ ಪರವಾಗಿ ಸನ್ಮಾನಿಸಲಾಯಿತು.
ಹೊಸನಗರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಹೆಬ್ಬಾಳ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿ ಕುಮಾರ್, ಸಾಹೀನ ನಾಸಿರ್, ಮುಖಂಡರಾದ ಶ್ರೀಧರ್ ಉಡುಪ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಿತಿಯ ಅಹಮದ್ ಮೊಹಮ್ಮದ್ ಆಲಿ, ಝುಬೇರ್ ಸೈಯದ್ ಯಾಸಿರ್ ಹಾಗೂ ಊರಿನ ಪ್ರಮುಖರಾದ ಮೊಹಮ್ಮದ್ ಹಾಜಿ, ನಾಸಿರ್ ಯೂಸುಫ್, ರಫೀಕ್ ಫಾರೂಕ್ ಸೇರಿ ಹಲವಾರು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಮದರಸದಲ್ಲಿ ನಡೆಸಿದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಮೆಂಟ್‌ಗಳಿಲ್ಲ