ಸೊನಲೆಯಲ್ಲಿ ಹಳ್ಳದ ದಂಡೆ ಒಡೆದು ಕೃಷಿ ಜಮೀನಿಗೆ ಹಾನಿ
ಹೊಸನಗರ : ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಗ್ರಾಮದ ಕೃಷಿ ಜಮೀನು ಸಂಪರ್ಕದ ಹಳ್ಳದ ದಂಡೆ ಒಡೆದು ಹೋದ ಪರಿಣಾಮ ಕೃಷಿಕರಾದ ನಂದಿಹಕ್ಲು ಈಶ್ವರಪ್ಪ, ಗಿರೀಶ್, ಮಂಜಪ್ಪ, ಕೊಲ್ಲಶೆಟ್ಟಿ, ಮಲ್ಲಿಕಾರ್ಜುನ ಗೌಡ, ಸತೀಶ್ ಮತ್ತು ಯೋಗೇಂದ್ರ ಎನ್ನುವವರ ಅಡಿಕೆ ತೋಟಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಚಿಕ್ಕಜೇನಿ ಗ್ರಾಮದ ಮಳೆಹಾನಿ ಸ್ಥಳಕ್ಕೆ ಹೊಸನಗರ ತಹಶೀಲ್ದಾರ್ ಭೇಟಿ-ಪರಿಶೀಲನೆ
ಹಾನಿ ಸ್ಥಳಕ್ಕೆ ಸೊನಲೆ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯ ಸತೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ