ತಗ್ಗದ ಮಳೆಯ ಆರ್ಭಟ - ಹೊಸನಗರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ
ಹೊಸನಗರ : ತಾಲ್ಲೂಕಿನೆಲ್ಲೆಡೆ ಮಳೆಯ ಬಿರುಸು ಮುಂದುವರಿದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಾಳೆ ಅಂದರೆ ಜುಲೈ 19ರ ಶುಕ್ರವಾರ ತಾಲ್ಲೂಕಿನ ಎಲ್ಲಾ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ರಶ್ಮಿ ಹೆಚ್ ಅವರು ಆದೇಶ ಹೊರಡಿಸಿದ್ದಾರೆ.
ಇಂದು ಕೂಡಾ ಮಳೆಯ ತೀವ್ರತೆ ಮುಂದುವರಿದಿದ್ದು, ನಾಳೆಯೂ ಮಳೆ ಮುಂದುವರಿಯುವ ವರದಿ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದ್ದು, ಸರ್ಕಾರಿ, ಅನುದಾನಿತ, ಖಾಸಗಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿದೆ. ಸದರಿ ರಜೆ ದಿನದಂದು ನಡೆಯಬೇಕಿದ್ದ ಪಾಠ ಪ್ರವಚನಗಳನ್ನು ಮುಂದಿನ ರಜೆ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆಯೂ ಈ ಆದೇಶದಲ್ಲಿ ತಿಳಿಸಲಾಗಿದೆ.
ಸೊನಲೆಯಲ್ಲಿ ಹಳ್ಳದ ದಂಡೆ ಒಡೆದು ಕೃಷಿ ಜಮೀನಿಗೆ ಹಾನಿ
ಕಳೆದ ಮೂರು ದಿನಗಳಿಂದ ತಾಲ್ಲೂಕಿನ ಎಲ್ಲಾ ಶಾಲಾ - ಕಾಲೇಜುಗಳಿಗೆ ’ಮಳೆಯ ರಜೆ’ ನೀಡಲಾಗಿದ್ದು, ನಾಳೆಯೊಂದಿಗೆ ಸತತವಾಗಿ ನಾಲ್ಕು ದಿನ ರಜೆ ನೀಡಿದಂತಾಗಿದೆ.
ಕಾಮೆಂಟ್‌ಗಳಿಲ್ಲ