ಹೆದ್ದಾರೀಪುರದಲ್ಲಿ ಮಳೆಯ ರಭಸಕ್ಕೆ ಸಂಪೂರ್ಣವಾಗಿ ಕುಸಿದ ಮನೆ - ಸ್ಥಳಕ್ಕೆ ಭೇಟಿ ನೀಡದ ಪಂಚಾಯ್ತಿ ಅಧಿಕಾರಿಗಳು
ಹೊಸನಗರ : ಮಳೆಯ ರಭಸಕ್ಕೆ ತಾಲ್ಲೂಕಿನ ಹಲವು ಕಡೆ ಮನೆ - ಮನೆ ಗೋಡೆ ಕುಸಿತ ಮುಂದುವರಿದಿದೆ. ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ತಳಲೆ ಕಗ್ಗಲಿಯ ರತ್ನಮ್ಮ ಕೋಂ ರೇಣುಕಪ್ಪಗೌಡ ಅವರ ಮನೆ ಭಾರೀ ಮಳೆಯಿಂದ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಮಳೆಯ ಆರ್ಭಟಕ್ಕೆ ಮನೆಯ ಒಂದು ಭಾಗ ಕುಸಿಯುತ್ತಿದ್ದಂತೆ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಮನೆಯ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
VIDEO - ಅರಸಾಳಿನ ಬಟಾಣಿಜಡ್ಡಿನ ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ -ಉಳಿ ಸುತ್ತಿಗೆ ಬಳಸಿ ಪ್ರಯಾಣಿಕರಿಂದಲೇ ಮರ ತೆರವು
ಈಗಾಗಲೇ ಗ್ರಾಮ ಪಂಚಾಯ್ತಿಯ ಗಮನಕ್ಕೆ ಮನೆ ಕುಸಿದಿರುವ ವಿಷಯವನ್ನು ತಲುಪಿಸಲಾಗಿದ್ದು, ಈವರೆಗೂ ಸ್ಥಳಕ್ಕೆ ಪಂಚಾಯ್ತಿ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಭೇಟಿ ನೀಡಿಲ್ಲ ಎಂದು ದೂರುತ್ತಾರೆ ಸ್ಥಳೀಯರು.
ಕಾಮೆಂಟ್‌ಗಳಿಲ್ಲ