Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಚಿಕ್ಕಜೇನಿ ಗ್ರಾಮದ ಮಳೆಹಾನಿ ಸ್ಥಳಕ್ಕೆ ಹೊಸನಗರ ತಹಶೀಲ್ದಾರ್ ಭೇಟಿ - ಪರಿಶೀಲನೆ

ಹೊಸನಗರ : ನಿನ್ನೆ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಚಿಕ್ಕಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುತ್ತಲ ಗ್ರಾಮದ ಜನ್ನಂಗೆ ಹೊಳೆ ತುಂಬಿ ಹರಿದ ಪರಿಣಾಮ ಮುತ್ತಲ ಹಾಗೂ ನಂಜವಳ್ಳಿ ಗ್ರಾಮಗಳ  ರಸ್ತೆ ಸಂಪರ್ಕ ಕಡಿತಗೊಂಡು, ಅಕ್ಕಪಕ್ಕದ  ಕೃಷಿ ಜಮೀನು, ಅಡಿಕೆ, ಬಾಳೆ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟು ಮಾಡಿದೆ. ಹಾಗೂ ಮಳೆಗೆ ಹೊಸಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಕೃಷ್ಣಪ್ಪ ಎನ್ನುವವರ ಮನೆ ಸಂಪೂರ್ಣ ಜಖಂಗೊಂಡಿದೆ.

ಅರಸಾಳಿನ ಬಟಾಣಿಜಡ್ಡಿನ ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ - ಉಳಿ ಸುತ್ತಿಗೆ ಬಳಸಿ ಪ್ರಯಾಣಿಕರಿಂದಲೇ ಮರ ತೆರವು

ಕೃಷ್ಣಪ್ಪ ಅವರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದು, ಹಾನಿಗೊಳಗಾದ ಸ್ಥಳಗಳಿಗೆ ತಾಲ್ಲೂಕು ದಂಡಾಧಿಕಾರಿ ರಶ್ಮಿ ಹಾಲೇಶ್ ಇಂದು ಭೇಟಿ ನೀಡಿ ಅಗತ್ಯ ಪರಿಹಾರದ ಭರವಸೆ ನೀಡಿದರು.

ಇವರೊಂದಿಗೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಶಾಸಕರ  ಆಪ್ತ ಸಹಾಯಕ ಸಣ್ಣಕ್ಕಿ ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯ ಭದ್ರಪ್ಪಗೌಡ, ಕೃಷ್ಣಪ್ಪ, ಚಿಕ್ಕಜೇನಿ ಗ್ರಾ.ಪಂ. ಪಿಡಿಓ ಮಂಜುಳ, ಕಾರ್ಯದರ್ಶಿ ವಿಜೇಂದ್ರ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಅಗತ್ಯ ಪರಿಹಾರ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ