ಎಂ. ಗುಡ್ಡೇಕೊಪ್ಪದಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿತ - ಬಡ ಕುಟುಂಬದ ಗಾಯದ ಮೇಲೆ ಬರೆ!!
ಹೊಸನಗರ : ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾವಿನಕೊಪ್ಪ ಗ್ರಾಮದ ಸಾಗರ ರಸ್ತೆ ನಿವಾಸಿ ಜಯಲಕ್ಷ್ಮಿ ಕೋಂ ಗೋವಿಂದಪ್ಪ ಎಂಬುವರ ಮನೆಗೋಡೆ ಕುಸಿದಿದೆ.
ಸರ್ಕಾರ ನೀಡಿದ ಮನೆಯ ಹಕ್ಕುಪತ್ರ ಪಡೆಯಲು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಈ ಕುಟುಂಬಕ್ಕೆ ಈ ದುರ್ಘಟನೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಅರಸಾಳಿನ ಬಟಾಣಿಜಡ್ಡಿನ ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ - ಉಳಿ ಸುತ್ತಿಗೆ ಬಳಸಿ ಪ್ರಯಾಣಿಕರಿಂದಲೇ ಮರ ತೆರವು
ಸ್ಥಳಕ್ಕೆ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕೇಶ್, ಸದಸ್ಯ ಮಹೇಂದ್ರ, ಸಿಬ್ಬಂದಿ ಧರ್ಮಪ್ಪ, ಗಣೇಶ್ ಭೇಟಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ