Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಿಪ್ಪನ್‌ಪೇಟೆಯಲ್ಲಿ ಮಳೆ ಆರ್ಭಟ - ಶಿವಮಂದಿರ ಎದುರಿನ ಮನೆ ಗೋಡೆ ಕುಸಿತ

ರಿಪ್ಪನ್‌ಪೇಟೆ : ನಿನ್ನೆ ಇಡೀ ದಿನ ಎಡೆಬಿಡದೆ ಸುರಿದ ಮಳೆಗೆ ಇಲ್ಲಿನ ಶಿವಮೊಗ್ಗ ರಸ್ತೆ ಶಿವಮಂದಿರ ಎದುರಿನ ರತ್ನಮ್ಮ ಎನ್ನುವವರ ಮನೆ ಗೋಡೆ ರಾತ್ರಿ 10 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ.

ಬರುವೆ ವಾರ್ಡ್‌ ನಂಬರ್‌ 3ರ ವ್ಯಾಪ್ತಿಯಲ್ಲಿರುವ ಈ ಮನೆಯಲ್ಲಿ ರತ್ನಮ್ಮನವರು ಮಲಗಿದ್ದ ಕೋಣೆಯ ಒಂದು ಭಾಗದ ಗೋಡೆ ಭಾರೀ ಸದ್ದಿನೊಂದಿಗೆ ಕುಸಿದು ಬಿದ್ದಿದ್ದು, ಗೋಡೆ ಹೊರಭಾಗಕ್ಕೆ ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ತಕ್ಷಣವೇ ಸ್ಥಳೀಯರು ಆಗಮಿಸಿ ಮನೆಯವರ ನೆರವಿಗೆ ನಿಂತಿದ್ದಾರೆ. 

ಈ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದು ಕುಟುಂಬ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದೆ.

ಕಾಮೆಂಟ್‌ಗಳಿಲ್ಲ