ಹೊಸನಗರ ತಾಲ್ಲೂಕಿನೆಲ್ಲೆಡೆ ಮಳೆ - ನಾಳೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ - ಚಕ್ರಾ ನಗರದಲ್ಲಿ 14 ಸೆಂ.ಮೀ ಮಳೆ
ಹೊಸನಗರ : ತಾಲ್ಲೂಕಿನೆಲ್ಲೆಡೆ ಪುನರ್ವಸು ಮಳೆ ಅಬ್ಬರ ಜಾಸ್ತಿಯಾಗಿದ್ದು, ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ನಾಳೆ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವ ವರದಿ ಬಂದ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ಅಂದರೆ ಮಂಗಳವಾರ ತಾಲ್ಲೂಕು ಆಡಳಿತ ರಜೆ ಘೋಷಿಸಿದೆ.
ಮಳೆಯ ನಿರಂತರತೆ ಹೇಗಿದೆ ಎಂದರೆ, ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಎರಡೂವರೆ ಅಡಿ ನೀರು ಹರಿದು ಬಂದಿದ್ದು ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8 ಗಂಟೆಗೆ 1778.15 ಅಡಿಗೆ ತಲುಪಿದೆ. ಜಲಾಶಯಕ್ಕೆ ದಿನವೊಂದಕ್ಕೆ 45115 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ತಾಲ್ಲೂಕಿನಾದ್ಯಂತ ಪುನರ್ವಸು ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಚಕ್ರಾ ನಗರದಲ್ಲಿ 140 ಮಿಲಿ ಮೀಟರ್, ಮಾಸ್ತಿ ಕಟ್ಟೆಯಲ್ಲಿ 135 ಮಿಲಿ ಮೀಟರ್, ಹುಲಿಕಲ್ಲಿನಲ್ಲಿ 132 ಮಿಲಿ ಮೀಟರ್, ಸಾವೇಹಕ್ಲಿನಲ್ಲಿ 125 ಮಿಲಿ ಮೀಟರ್, ಬಿದನೂರು ನಗರದಲ್ಲಿ 109 ಮಿಲಿಮೀಟರ್, ಮಾಣಿಯಲ್ಲಿ 102 ಮಿಲಿ ಮೀಟರ್, ಯಡೂರಿನಲ್ಲಿ 94 ಮಿಲಿ ಮೀಟರ್, ಕಾರ್ಗಲ್ ನಲ್ಲಿ 83.2 ಮಿಲಿ ಮೀಟರ್, ಹೊಸನಗರ ಹಾಗೂ ಹೊಂಬುಜದಲ್ಲಿ 57 ಮಿಲಿ ಮೀಟರ್, ಅರಸಾಳಿನಲ್ಲಿ 33 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ