ಮುಂದುವರಿದ ಮಳೆ - ನಗರ, ಕರಿಮನೆ, ಸಂಪೆಕಟ್ಟೆ, ನಿಟ್ಟೂರು ಮತ್ತು ಯಡೂರು ಕ್ಲಸ್ಟರ‍್ರಿನಲ್ಲಿ ಶಾಲಾ ಹಂತದಲ್ಲೇ ರಜೆ ಘೋಷಿಸಲು ಬಿಇಓ ಸೂಚನೆ
ಹೊಸನಗರ : ತಾಲ್ಲೂಕಿನ ನಗರ ಹೋಬಳಿ ಸುತ್ತಮುತ್ತ ವ್ಯಾಪಕ ಗಾಳಿ - ಮಳೆ ಮುಂದುವರೆದಿದ್ದು, ಈ ಬಗ್ಗೆ ತಾಲ್ಲೂಕಿನ ತಹಶೀಲ್ದಾರ್‌ರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿರುವ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಗರ, ಕರಿಮನೆ, ಸಂಪೆಕಟ್ಟೆ, ನಿಟ್ಟೂರು ಮತ್ತು ಯಡೂರು ಕ್ಲಸ್ಟರ್ ಗಳ ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿಯೇ ಎಸ್‌ಡಿಎಂಸಿ ಜೊತೆ ಸಮಾಲೋಚಿಸಿ ಶಾಲೆಗಳಿಗೆ ರಜೆ ನೀಡಲು ಸೂಚಿಸಿದ್ದಾರೆ.
ತಹಶೀಲ್ದಾರ್ ಅವರ ಸೂಚನೆಯಂತೆ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗದಂತೆ ಕ್ರಮ ವಹಿಸಲು ಬಿಇಓ ತಿಳಿಸಿದ್ದು, ಮಳೆ-ಗಾಳಿಯಿಂದ ಅಪಾಯದ ಸನ್ನಿವೇಶ ಉಂಟಾದಲ್ಲಿ ರಜೆ ನೀಡಲು ತಿಳಿಸಿದ್ದಾರೆ. ಹಾಗೂ ಮಕ್ಕಳು ಮತ್ತು ಪೋಷಕರ ಗಮನಕ್ಕೆ ಸಕಾಲದಲ್ಲಿ ಶಾಲೆಗೆ ರಜೆ ನೀಡಿರುವ ವಿಚಾರವನ್ನು ತರಲು ತಿಳಿಸಿದ್ದಾರೆ. ಈ ಬಗ್ಗೆ ಸಿಆರ್‌ಪಿಗಳ ಗಮನಕ್ಕೆ ತಂದು, ರಜೆಗಳಿಂದ ಕೊರತೆಯಾಗುವ ಶಾಲಾ ದಿನಗಳನ್ನು ಮುಂದೆ ಬರುವ ಶನಿವಾರಗಳಂದು ಪೂರ್ಣ ದಿನ ಶಾಲೆ ನಡೆಸುವುದರ ಮೂಲಕ ಸರಿದೂಗಿಸಿಕೊಳ್ಳಲು ಬಿಇಓ ಹೆಚ್. ಆರ್. ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಕಾಮೆಂಟ್‌ಗಳಿಲ್ಲ