ವ್ಯಾಪಕ ಮಳೆ ಹಿನ್ನೆಲೆ - ಹೊಸನಗರ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ನಾಳೆಯೂ ರಜೆ
ಹೊಸನಗರ : ತಾಲ್ಲೂಕಿನೆಲ್ಲೆಡೆ ಅತಿಯಾದ ಮಳೆ ಹಾಗೂ ಗಾಳಿ ವ್ಯಾಪಕವಾಗಿ ಬೀಸುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ನಾಳೆ ಅಂದರೆ ದಿನಾಂಕ 27-07-2024ರ ಶನಿವಾರದಂದು ತಾಲ್ಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ತಹಶೀಲ್ದಾರ್ ರಶ್ಮಿ ಹೆಚ್.ಜೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಒಂದೇ ಸಮನೆ ಮಳೆ ಗಾಳಿ ಬೀಸುತ್ತಿರುವುದರಿಂದ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪಾಲಕರಿಗೆ ತಿಳಿಸಿರುವ ತಹಶೀಲ್ದಾರ್, ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸಿದ್ದಾಗಿ ತಿಳಿಸಿದ್ದಾರೆ.
ಕಳೆದ ವಾರ ಪೂರ್ತಿ ತಾಲ್ಲೂಕಿನ ಎಲ್ಲಾ ಶಾಲಾ - ಕಾಲೇಜುಗಳಿಗೆ ’ಮಳೆಯ ರಜೆ’ ನೀಡಲಾಗಿತ್ತು. ಮಳೆ ಬಿಡುವಿನಿಂದಾಗಿ ಈ ವಾರದ ಆರಂಭದಿಂದ ಶಾಲೆ ಪುನಃ ತೆರೆದಿದ್ದು, ಮಳೆ ಜಾಸ್ತಿಯಾಗಿದ್ದರಿಂದ ಇಂದು ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಈಗ ನಾಳೆ ಅಂದರೆ ಶನಿವಾರವೂ ರಜೆಯನ್ನು ಘೋಷಿಸಲಾಗಿದೆ.
ಕಾಮೆಂಟ್‌ಗಳಿಲ್ಲ