ಹೊಸನಗರದೆಲ್ಲೆಡೆ ಅಬ್ಬರಿಸುತ್ತಿದೆ ಪುನರ್ವಸು ಮಳೆ - ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 15 ಸೆಂಟಿ ಮೀಟರ್ ಮಳೆ
ಹೊಸನಗರ : ತಾಲ್ಲೂಕಿನೆಲ್ಲೆಡೆ ಪುನರ್ವಸು ಮಳೆ ಬಿರುಸು ಪಡೆದುಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 15 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 149 ಮಿಲಿ ಮೀಟರ್, ಹುಲಿಕಲ್ಲಿನಲ್ಲಿ 140 ಮಿಲಿ ಮೀಟರ್, ಬಿದನೂರು ನಗರದಲ್ಲಿ 132 ಮಿಲಿ ಮೀಟರ್, ಮಾಣಿಯಲ್ಲಿ 130 ಮಿಲಿ ಮೀಟರ್, ಯಡೂರಿನಲ್ಲಿ 129 ಮಿಲಿ ಮೀಟರ್, ಸಾವೇಹಕ್ಲಿನಲ್ಲಿ 129 ಮಿಲಿ ಮೀಟರ್, ಚಕ್ರಾ ನಗರದಲ್ಲಿ 112 ಮಿಲಿ ಮೀಟರ್, ಕಾರ್ಗಲ್ ನಲ್ಲಿ 108.4 ಮಿಲಿ ಮೀಟರ್, ಹೊಸನಗರದಲ್ಲಿ 62.8 ಮಿಲಿ ಮೀಟರ್ ಮಳೆ ಬಿದ್ದಿದೆ.
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8 ಗಂಟೆಗೆ 1775.70 ಅಡಿ ತಲುಪಿದ್ದು, ಜಲಾಶಯಕ್ಕೆ 36197 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1754.45 ಅಡಿ ದಾಖಲಾಗಿತ್ತು. ಜಲಾನಯನ ಪ್ರದೇಶದಲ್ಲಿ ಇಂದು ಸಹ ಪುನರ್ವಸು ಮಳೆ ಅಬ್ಬರ ಮುಂದುವರೆದಿದೆ.
ಕಾಮೆಂಟ್‌ಗಳಿಲ್ಲ