ಹೊಸನಗರ ತಾಲ್ಲೂಕು ಬಿಜೆಪಿ ಕಾರ್ಯಕರ್ತರಿಂದ ಸಂಸದ ಬಿ ವೈ ಆರ್ ಮತ್ತು ಎಂಎಲ್‌ಸಿ ಡಾ.ಸರ್ಜಿಗೆ ಅಭಿನಂದನಾ ಸಮಾರಂಭ
ಹೊಸನಗರ : ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾದ ಸಂಸದ ಬಿ. ವೈ. ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ. ಧನಂಜಯ ಸರ್ಜಿಯವರಿಗೆ ಹೊಸನಗರ ತಾಲ್ಲೂಕು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಪಟ್ಟಣದ ಈಡಿಗ ಸಭಾಭವನದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ, ಗೆಲುವನ್ನು ಸಂಭ್ರಮಿಸಿದರು.
ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ನಮ್ಮ ಪಕ್ಷದ ಕಾರ್ಯಕರ್ತರೇ ನನಗೆಲ್ಲವೂ ಆಗಿದ್ದಾರೆ. ಅವರ ಶ್ರಮದಿಂದಾಗಿಯೇ ನಾನು ಸಂಸದನಾಗಿ ಗೆಲುವನ್ನು ಸಾಧಿಸಲು ಸಾಧ್ಯವಾಯಿತು ಎಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಸಕರಾಗಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಹರತಾಳು ಹಾಲಪ್ಪನವರ ಸೋಲು ಒಂದಿಷ್ಟು ಚಿಂತೆಗೀಡು ಮಾಡಿತ್ತು. ಅವರ ಸೋಲಿಗೆ ಕಾಂಗ್ರೆಸ್ಸಿನ ಗ್ಯಾರಂಟಿ ಘೋಷಣೆಯೇ ಕಾರಣವಾಯಿತು. ಆದ್ದರಿಂದ ಈ ಬಾರಿಯ ಚುನಾವಣೆ ಕಷ್ಟವಾಗುತ್ತದೆ ಎಂದುಕೊಂಡೆ. ಆದರೆ ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರ ಫಲವಾಗಿ ನನ್ನ ಗೆಲುವು ಸಾಧ್ಯವಾಯಿತು ಎಂದ ಬಿ.ವೈ. ರಾಘವೇಂದ್ರ, ಸಾಗರ ಮತ್ತು ಹೊಸನಗರ ಭಾಗದಲ್ಲಿ ನಮ್ಮ ಪಕ್ಷ ಇನ್ನೂ ಗಟ್ಟಿಯಾಗಿದೆ. ಕಾಂಗ್ರೆಸ್ಸಿನ ಒಂದು ಲಕ್ಷದ ಗ್ಯಾರಂಟಿಗೆ ನಾವು ಬೆಲೆ ಕೊಡುವುದಿಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಲೆಯೇರಿಕೆಯ ಬಿಸಿಗೆ ಜನರು ತತ್ತರಿಸುತ್ತಿದ್ದಾರೆ. ಹೀಗೆ ಬೆಲೆ ಏರಿಸಿದ್ದೊಂದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಕುಟುಕಿದ ಸಂಸದರು, ಮೂಡಾ ನಿವೇಶನ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಕಾಂಗ್ರೆಸ್ಸಿನ ಸಾಧನೆ ಏನೆಂದು ತೋರಿಸುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಕೆ.ವಿ. ಸುಬ್ರಮಣ್ಯ, ಪ್ರಸನ್ನ ಕೆರೆಕೈ, ಸುರೇಶ್ ಸ್ವಾಮಿರಾವ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವರ್ತೇಶ್, ಎನ್.ಆರ್. ದೇವಾನಂದ್, ಶ್ರೀಮತಿ ಭಾರತಿ ಶೆಟ್ಟಿ, ಗಾಯತ್ರಿ, ಮಲ್ಲಪ್ಪ, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಕೆ. ಎಸ್. ಪ್ರಶಾಂತ್, ಉಮೇಶ್ ಕಂಚುಗಾರ್, ಆಲುವಳ್ಳಿ ವೀರೇಶ್, ಎಂ. ಎನ್. ಸುಧಾಕರ, ಕೆ. ವಿ. ಕೃಷ್ಣಮೂರ್ತಿ, ಗಣಪತಿ ಬೆಳಗೋಡು, ಹೆಚ್.ಎನ್. ಶ್ರೀಪತಿ ರಾವ್, ಹೆಚ್. ಬಿ. ಕಲ್ಯಾಣಪ್ಪ ಗೌಡ, ಕೆ ವಿ ಕೃಷ್ಣಮೂರ್ತಿ ಮೊದಲಾದ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ