Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ವಿಶ್ವ ಪ್ರಾಣಿ ಜನ್ಯ ರೋಗಗಳ ದಿನಾಚರಣೆ - ರೋಗ ನಿಯಂತ್ರಣದ ಕುರಿತು ಮಾಹಿತಿ ವಿನಿಮಯ

ಹೊಸನಗರ : ಇಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿನ್ನೆ ವಿಶ್ವ ಪ್ರಾಣಿ ಜನ್ಯ ರೋಗಗಳ ದಿನಾಚರಣೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುರೇಶ್‌ ಅವರು, ಪ್ರಾಣಿಗಳ ಮೂಲಕ ಸೂಕ್ಷ್ಮ ಜೀವಿಗಳಿಂದ ಮನುಷ್ಯರಿಗೆ ಹರಡಬಲ್ಲ ಜೆನೋಟಿಕ್ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿ, ರೇಬಿಸ್, ಹಕ್ಕಿ ಜ್ವರ, ಟೋಕ್ಸೊಪ್ಲಾಸ್ಮೊಸಿಸ್, ಹಾವು ಕಡಿತ, ನಿಫಾ, ಜಪಾನೀಸ್‌ ಎನ್ಸೆಫಾಲಿಟಿಸ್‌ ಸಿಸ್ಟಿಸರ್ಕೋಸಿಸ್‌, ಇಲಿ ಜ್ವರ, ಪ್ಲೇಗ್, ಕೆಎಫ್‌‌ಡಿ ಮೊದಲಾದ ಕಾಯಿಲೆಗಳು ಪ್ರಾಣಿಗಳ ಮೂಲಕ ಹರಡಲಿದ್ದು, ಈ ಎಲ್ಲಾ ಕಾಯಿಲೆಗಳೊಂದಿಗೆ ಮಹಾಮಾರಿ ಡೆಂಗ್ಯೂ ನಿಯಂತ್ರಣ ಬಗ್ಗೆ ಸಮರೋಪಾದಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ, ಕಾಯಿಲೆಗಳ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಜುಲೈ 11 ರಂದು ನಡೆಯಲಿರುವ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಕ್ರಮಬದ್ಧವಾಗಿ ಆಚರಿಸುವಂತೆಯೂ ಅವರು ಸಭೆಯಲ್ಲಿ ಸೂಚಿಸಿದರು.

ಈ ಸಂದರ್ಭದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಯಾನ್ ಪಿ ಕೂಟ್, ಡಾ. ಸುರೇಖಾ. ಡಾ. ಚೈತ್ರ, ಡಾ ಪವನ್, ಆಶಾ, ಚೈತ್ರ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ