ಹೊಸನಗರದ ಬಿದನೂರು ನಗರದಲ್ಲಿ ಮಹಾ ಮಳೆ - 24 ಗಂಟೆಗಳಲ್ಲಿ 316 ಎಂಎಂ ದಾಖಲೆ ಮಳೆ - ಲಿಂಗನಮಕ್ಕಿ ಜಲಾಶಯ ಭರ್ತಿಗೆ ಇನ್ನು ಕೇವಲ ಎಂಟೂವರೆ ಅಡಿ ಬಾಕಿ
ಹೊಸನಗರ : ತಾಲ್ಲೂಕಿನ ಬಿದನೂರು ನಗರ ಹೋಬಳಿಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 316 ಎಂ ಎಂ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 240 ಎಂಎಂ, ಚಕ್ರಾ ನಗರದಲ್ಲಿ 220 ಎಂಎಂ, ಯಡೂರಿನಲ್ಲಿ 217ಎಂಎಂ, ಹುಲಿಕಲ್ಲಿನಲ್ಲಿ 210 ಎಂಎಂ, ಮಾಣಿಯಲ್ಲಿ 185 ಎಂಎಂ, ಸಾವೇಹಕ್ಲಿನಲ್ಲಿ 167 ಎಂಎಂ, ಕಾರ್ಗಲ್ಲಿನಲ್ಲಿ 67.4 ಎಂಎಂ, ಹೊಸನಗರ ಪಟ್ಟಣದಲ್ಲಿ 39 ಎಂಎಂ ಮಳೆ ದಾಖಲಾಗಿದೆ.
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1810.50 ಅಡಿ ತಲುಪಿದ್ದು, ಜಲಾಶಯಕ್ಕೆ 50710 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1786.30 ಅಡಿ ದಾಖಲಾಗಿತ್ತು.
ಕಾಮೆಂಟ್‌ಗಳಿಲ್ಲ