ನಗರ ಹೋಬಳಿಯಲ್ಲಿ ಮಳೆ ಮ್ಯಾರಥಾನ್ - ನಿರಂತರ 5 ಗಂಟೆ ಸುರಿದ ಮಳೆ - ಮುಳುಗಿದ ಸೇತುವೆ - ಕುಸಿದ ಮನೆ - ದೇಗುಲ ಜಲಾವೃತ
ಹೊಸನಗರ : ತಾಲ್ಲೂಕಿನ ನಗರ ಹೋಬಳಿಯಲ್ಲಿ ಇಂದು ಬೆಳಿಗ್ಗೆ ಆರಂಭವಾದ ಮಳೆ ಸತತ 5 ಗಂಟೆಗಳ ಕಾಲ ಒಂದೇ ಸಮನೆ ಸುರಿದ ಪರಿಣಾಮ ನಗರ ಹೋಬಳಿಯ ಬಹುತೇಕ ಕಡೆ ಎಲ್ಲಿ ನೋಡಿದರಲ್ಲಿ ನೀರು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳಲ್ಲೂ ಕೂಡಾ ನೀರು ನಿಂತಿದ್ದು, ಇತಿಹಾಸ ಪ್ರಸಿದ್ಧ ಪಂಚಮುಖಿ ಆಂಜನೇಯ ದೇವಾಲಯ ಇದೇ ಮೊದಲ ಬಾರಿಗೆ ಜಲಾವೃತವಾಗಿದ್ದರೆ, ಸಂಡೋಡಿಯಲ್ಲಿ ಕಿರುಸೇತುವೆಯೇ ಮುಳುಗಡೆಯಾಗಿದೆ. ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನ ಮನೆ ಸುತ್ತ ನೀರು ತುಂಬಿ ಅಕ್ಷರಶಃ ದ್ವೀಪದಂತಾಗಿದೆ. ಬೈಸೆ ಗ್ರಾಮದ ಪ್ರೇಮಾನಂದ ಎನ್ನುವವರ ಮನೆ ಗೋಡೆ ಮಳೆಗೆ ಕುಸಿದಿದೆ.
ಸ್ವಲ್ಪವೂ ಬಿಡುವು ಕೊಡದೇ ಒಂದೇ ಸಮನೆ ಮಳೆ ಸುರಿಯುತ್ತಿರುವ ಪರಿಣಾಮ ನಗರ ಹೋಬಳಿಯ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬಿದನೂರು ನಗರವೊಂದರಲ್ಲೇ ಸೋಮವಾರ ರಭಸದ 316 ಮಿಲಿಮೀಟರ್ ದಾಖಲೆ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾಮೆಂಟ್‌ಗಳಿಲ್ಲ