ಹೊಸನಗರ ತಾಲ್ಲೂಕಿನಲ್ಲಿ ಮಳೆ ಕ್ಷೀಣಿಸಿದರೂ ಮಾಸ್ತಿಕಟ್ಟೆಯಲ್ಲಿ 104 ಮಿಲಿ ಮೀಟರ್ ಮಳೆ - ಲಿಂಗನಮಕ್ಕಿ ಜಲಾಶಯ ಭರ್ತಿಗೆ ಬೇಕಿದೆ ಇನ್ನೂ 22 ಅಡಿ ನೀರು
ಹೊಸನಗರ : ತಾಲ್ಲೂಕಿನೆಲ್ಲೆಡೆ ಮಳೆ ಒಂದಿಷ್ಟು ಬಿರುಸನ್ನು ಕಡಿಮೆ ಮಾಡಿದೆಯಾದರೂ, ಸೋಮವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 104 ಮಿಲಿ ಮೀಟರ್ ಮಳೆಯಾಗಿದೆ.
ಇನ್ನುಳಿದಂತೆ ಹುಲಿಕಲ್ಲಿನಲ್ಲಿ 98.4 ಮಿಲಿ ಮೀಟರ್, ಚಕ್ರಾ ನಗರದಲ್ಲಿ 91 ಮಿಲಿ ಮೀಟರ್, ಕಾರ್ಗಲ್ಲಿನಲ್ಲಿ 82.4 ಮಿಲಿ ಮೀಟರ್, ಯಡೂರಿನಲ್ಲಿ 78 ಮಿಲಿ ಮೀಟರ್, ಹೊಂಬುಜದಲ್ಲಿ 76.4 ಮಿಲಿ ಮೀಟರ್, ಮಾಣಿಯಲ್ಲಿ 68 ಮಿಲಿ ಮೀಟರ್, ಬಿದನೂರು ನಗರದಲ್ಲಿ 62 ಮಿಲಿ ಮೀಟರ್, ರಿಪ್ಪನ್‌ಪೇಟೆಯಲ್ಲಿ 28.4 ಮಿಲಿ ಮೀಟರ್ ಮತ್ತು ಹೊಸನಗರ ಪಟ್ಟಣದಲ್ಲಿ 18 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಸೋಮವಾರ ಬೆಳಿಗ್ಗೆ 8 ಗಂಟೆಗೆ 1797.60 ಅಡಿ ತಲುಪಿದ್ದು, ಜಲಾಶಯಕ್ಕೆ 44387 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 32 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.
ಕಾಮೆಂಟ್‌ಗಳಿಲ್ಲ