ಹೊಂಬುಜದಲ್ಲಿ ಭಾರೀ ಮಳೆಗೆ ಸಂಪರ್ಕ ರಸ್ತೆಯಲ್ಲಿ ಕಂದಕ - ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಪಂಚಾಯಿತಿ ಅಧ್ಯಕ್ಷರು
ರಿಪ್ಪನ್‌ಪೇಟೆ : ಸಮೀಪದ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಜಡ್ಡು ಎಸ್.ಸಿ. ಕಾಲೋನಿ - ನಾಗರಹಳ್ಳಿ ಸಂಪರ್ಕ ಸೇತುವೆ ಭಾರೀ ಮಳೆಗೆ ಕುಸಿದು ಹೋಗಿ ರಸ್ತೆ ಮಧ್ಯದಲ್ಲಿ ದೊಡ್ಡ ಕಂದಕ ಬಿದ್ದಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಕಂದಕ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಳ ದೇವರಾಜ್ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ದೇವೇಂದ್ರ ಜೈನ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಮೇಶ್ ಹಾಗೂ ಸತೀಶ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
VIDEO - ಮಳೆಗೆ ಮೈದುಂಬಿದ ಬಾಳೆಬರೆ ಘಾಟಿ ಜಲಪಾತದ ಚೆಲುವು ಹೇಗಿದೆ ನೋಡಿ...
ಸಧ್ಯಕ್ಕೆ ರಸ್ತೆ ಮಧ್ಯದಲ್ಲಿ ಬಿದ್ದಿರುವ ಕಂದಕವನ್ನು ತುರ್ತಾಗಿ ತುಂಬಿಸಿ ಜನರಿಗೆ ಯಾವುದೇ ತೊಂದರೆಯಾಗದಂತೆ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದ ಪಂಚಾಯಿತಿ ಪ್ರತಿನಿಧಿಗಳು, ಉಳಿದಂತೆ ಸಂಪರ್ಕ ಸೇತುವೆಯನ್ನು ಮಳೆ ಕಡಿಮೆಯಾಗುತ್ತಿದ್ದಂತೆ ದುರಸ್ತಿಗೊಳಿಸುವುದಾಗಿ ತಿಳಿಸಿದರು.
ಕಾಮೆಂಟ್‌ಗಳಿಲ್ಲ