ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ - ಹೊಸನಗರದ ಹುಲಿಕಲ್‌ನಲ್ಲಿ ಅತ್ಯಧಿಕ 138 ಮಿಲಿ ಮೀಟರ್ ಮಳೆ
ಹೊಸನಗರ : ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹಾಗೂ ಮಲೆನಾಡಿನ ಹೃದಯಭಾಗವಾದ ಹೊಸನಗರ ತಾಲ್ಲೂಕಿನಾದ್ಯಂತ ಆರಿದ್ರ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕಳೆದ ವರ್ಷ ಇದೇ ದಿನಕ್ಕಿಂತ 13 ಅಡಿಗಳಷ್ಟು ಹೆಚ್ಚಾಗಿದ್ದು, ಜಲಾಶಯಕ್ಕೆ 2095 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಹುಲಿಕಲ್‌ನಲ್ಲಿ 138 ಮಿಲಿ ಮೀಟರ್ ಅತ್ಯಧಿಕ ಮಳೆ ದಾಖಲಾಗಿರುತ್ತದೆ.
ಉಳಿದಂತೆ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 133 ಮಿಲಿ ಮೀಟರ್, ಮಾಣಿಯಲ್ಲಿ 114 ಮಿಲಿ ಮೀಟರ್, ಯಡೂರಿನಲ್ಲಿ 108 ಮಿಲಿ ಮೀಟರ್, ಹೊಸನಗರದಲ್ಲಿ 68.4 ಮಿಲಿ ಮೀಟರ್, ಕಾರ್ಗಲ್‌ನಲ್ಲಿ 64.6 ಮಿಲಿ ಮೀಟರ್, ಹೊಂಬುಜದಲ್ಲಿ 39.4 ಮಿಲಿ ಮೀಟರ್, ಅರಸಾಳಿನಲ್ಲಿ 21.6 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮಂಗಳವಾರ ಬೆಳಿಗ್ಗೆ 8 ಗಂಟೆಗೆ 1753.20 ಅಡಿ ತಲುಪಿದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 1740.65 ಅಡಿ ದಾಖಲಾಗಿತ್ತು.
ಕಾಮೆಂಟ್‌ಗಳಿಲ್ಲ