ಇಂದಿನಿಂದ ಹಸಿರುಮಕ್ಕಿ ಲಾಂಚ್ ಪುನರಾರಂಭ - ನಿಟ್ಟೂರು ಭಾಗದ ಜನರಿಗೆ ನೆಮ್ಮದಿ
ಹೊಸನಗರ : ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಶರಾವತಿ ಹಿನ್ನೀರಿನಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್ ಸೇವೆ ಇಂದಿನಿಂದ ಪುನರಾರಂಭಗೊಂಡಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಹಿನ್ನೀರು ಪ್ರದೇಶದಲ್ಲಿ ನೀರಿನ ಕೊರತೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಕಳೆದ ಒಂದು ತಿಂಗಳಿನಿಂದ ಹಸಿರುಮಕ್ಕಿ ಲಾಂಚ್‌ನ್ನು ಸ್ಥಗಿತಗೊಳಿಸಲಾಗಿತ್ತು.
VIDEO - ಇಂದಿನಿಂದ ಹಸಿರುಮಕ್ಕಿ ಲಾಂಚ್ ಪುನರಾರಂಭ - ನಿಟ್ಟೂರು ಭಾಗದ ಜನರಿಗೆ ನೆಮ್ಮದಿ
ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದರಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದಾಗಿ ಲಾಂಚ್ ಮತ್ತೆ ಸಂಚರಿಸಲಾರಂಭಿಸಿದ್ದು, ಹೊಸನಗರ ತಾಲ್ಲೂಕಿನ ನಿಟ್ಟೂರು ಭಾಗದ ಜನರೂ ಸೇರಿದಂತೆ ಸಾಗರದಿಂದ ಕೊಲ್ಲೂರು, ಕುಂದಾಪುರಕ್ಕೆ ತೆರಳುವವರಿಗೆ ಪ್ರಯಾಣ ಸುಲಭವಾಗಲಿದೆ.






ಕಾಮೆಂಟ್‌ಗಳಿಲ್ಲ