ನಿರ್ಮಾಣ ಹಂತದ ಹೊಸನಗರ ಕಳೂರು ಸೊಸೈಟಿ ಕಟ್ಟಡದ ಸೆಂಟ್ರಿಂಗ್ ಕುಸಿತ - ಇಬ್ಬರಿಗೆ ಗಾಯ
ಹೊಸನಗರ : ಇಲ್ಲಿನ ಚೌಡಮ್ಮ ರಸ್ತೆಯ ಕಳೂರು ಸೇವಾ ಸಹಕಾರ ಬ್ಯಾಂಕಿನ ನೂತನ ಕಟ್ಟಡ ನಿರ್ಮಾಣಕ್ಕೆ ಆರ್‌ಸಿಸಿ ಸೆಂಟ್ರಿಂಗ್ ಕಾರ್ಯ ನಡೆಯುತ್ತಿದ್ದು, ನಿನ್ನೆ ಸಂಜೆ ಕಟ್ಟಡದ ಒಂದು ಭಾಗದ ಸೆಂಟ್ರಿಂಗ್ ಇದ್ದಕ್ಕಿದ್ದ ಹಾಗೇ ಕುಸಿದು ಬಿದ್ದ ಕಾರಣ ಇಬ್ಬರು ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸೆಂಟ್ರಿಂಗ್ ಕುಸಿದ ರೀತಿಯನ್ನು ನೋಡಿದರೆ ಅದೃಷ್ಟವಶಾತ್ ಸಂಭವಿಸಬಹುದಾದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಗಾಯದೊಂದಿಗೆ ಕಾರ್ಮಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸೆಂಟ್ರಿಂಗ್ ಕುಸಿಯುವ ಸಂದರ್ಭದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ಸೆಂಟ್ರಿಂಗ್‌ನ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ದುರಂತ ಸಂಭವಿಸುತ್ತಿದ್ದಂತೆ ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಚುರುಕಿನ ಕಾರ್ಯಾಚರಣೆ ನಡೆಸಿದರು.
ಕಾಮೆಂಟ್‌ಗಳಿಲ್ಲ