Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರಕ್ಕೆ ನೀರುಣಿಸುವ ಜಾಕ್‌ವೆಲ್‌ಗೆ ಬಿದ್ದ ಪಂಪ್‌ಸೆಟ್‌ ಮೇಲೆತ್ತಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಹೊಸನಗರ : ಪಟ್ಟಣಕ್ಕೆ ನೀರುಣಿಸುವ ಜಾಕ್‌ವೆಲ್‌ನಲ್ಲಿ ಪಂಪ್‌ಸೆಟ್‌ ಮೋಟಾರ್ ಬಿದ್ದಿದ್ದು, ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕ ಕಾಣಿಸಿತ್ತು. ಸುದ್ದಿ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾದ ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಚುರುಕಿನ ಕಾರ್ಯಾಚರಣೆ ನಡೆಸಿ ಬಿದ್ದಿದ್ದ ಪಂಪ್‌ಸೆಟ್‌ ಮೋಟಾರ್‌ನ್ನು ಮೇಲೆತ್ತಿದ ಘಟನೆ ಪಟ್ಟಣದ ಕಳೂರಿನಲ್ಲಿ ಗುರುವಾರ ಸಂಜೆ ನಡೆದಿದೆ. ಇದರಿಂದಾಗಿ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಪಟ್ಟಣ ಪಂಚಾಯಿತಿ ಕಚೇರಿಯ ಸಿಬ್ಬಂದಿಗಳು ಹಾಗೂ ನಾಗರೀಕರು ಅಭಿನಂದಿಸಿದ್ದಾರೆ.

ಕಾಮೆಂಟ್‌ಗಳಿಲ್ಲ