ಹೊಸನಗರ - ಋತುಚಕ್ರ ನೈರ್ಮಲ್ಯ ಅರಿವು ಕಾರ್ಯಕ್ರಮ
ಹೊಸನಗರ : ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಪಾಲಿಸಬೇಕಾದ ನೈರ್ಮಲ್ಯದ ಅರಿವು ಮೂಡಿಸುವುದು ಸಮಾಜದ ಕರ್ತವ್ಯ. ಅದರಿಂದ ಹೆಣ್ಣುಮಕ್ಕಳು ಆರೋಗ್ಯದಿಂದಿರಲು ಸಹಾಯವಾಗುತ್ತದೆ ಎಂದು ಶಿವಮೊಗ್ಗ ಸಖೀ ಕೇಂದ್ರದ ವಕೀಲರಾದ ಶ್ರೀಮತಿ ನೀಲಾಕ್ಷಿ ತಿಳಿಸಿದರು.
ಅವರು ಇತ್ತೀಚೆಗೆ ಹೊಸನಗರದ ಕುವೆಂಪು ವಸತಿ ವಿದ್ಯಾಲಯದಲ್ಲಿ ಸಖೀ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಸಾಂತ್ವನ ಮಹಿಳಾ ಸಹಾಯವಾಣಿ ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅರಿವು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಾಗೇಂದ್ರ ಅವರು, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪರಿಸರದ ಕುರಿತು ಕಿವಿಮಾತು ಹೇಳಿದರು.
ಹೊಸನಗರ ಸಾಂತ್ವನ ಮಹಿಳಾ ಸಹಾಯವಾಣಿಯ ಆಪ್ತ ಸಮಾಲೋಚಕರಾದ ಪ್ರೇಮಾ ಕಾಂತರಾಜ್, ಆರೋಗ್ಯ ಇಲಾಖೆ ಶೋಭಾ ಹೆಚ್.ಎನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀರಮ್ಮ ಮುಂತಾದವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕುವೆಂಪು ವಿದ್ಯಾಶಾಲೆಯ ಚಾಕ್ಷುಷಾ ಎಸ್. ಸೊನಲೆ ಮತ್ತು ಚಿಂತನಾ ಪ್ರಾರ್ಥಿಸಿದರು. ಶಿಕ್ಷಕರಾದ ನಯನಾ ಸ್ವಾಗತಿಸಿದರು. ಕುಮಾರಿ ಸ್ವಾತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಶಿತಾ ನಿರೂಪಣೆ ಮಾಡಿದರು.
ಕಾಮೆಂಟ್‌ಗಳಿಲ್ಲ