ಅರಳಿಕೊಪ್ಪದಲ್ಲಿ ಭಾರೀ ಮಳೆಗೆ ಧರೆಗುರುಳಿದ ಬೃಹತ್ ಗಾತ್ರದ ಮರ - ತತ್‌ಕ್ಷಣ ಸ್ಪಂದಿಸಿದ ಹೊಸನಗರ ತಾಲ್ಲೂಕು ಆಡಳಿತ - ಸಾಗರ ಹೊಸನಗರ ರಸ್ತೆ ಸಂಚಾರ ಅಭಾದಿತ
ಹೊಸನಗರ : ಹೊಸನಗರ ಸಾಗರ ರಸ್ತೆಯ ಅರಳಿಕೊಪ್ಪದ ಬಳಿ ಇಂದು ಸಂಜೆ ಭಾರೀ ಮಳೆಗೆ ಬೃಹತ್ ಗಾತ್ರದ ಮರವೊಂದು ರಾಷ್ಟ್ರೀಯ ಹೆದ್ದಾರಿ 766 ಸಿ ಮೇಲೆ ಉರುಳಿ ಬಿದ್ದಿದ್ದು, ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಮೆಸ್ಕಾಂ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ, ಸುರಿಯುವ ಮಳೆಯಲ್ಲೂ ಗ್ರಾಮಸ್ಥರ ನೆರವಿನಿಂದ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು.
ಮರ ಬಿದ್ದಿದ್ದರಿಂದಾಗಿ ಕೆಲವು ಕಾಲ ಮಾತ್ರವೇ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಭಾನುವಾರದ ರಜೆಯ ದಿನವಾದರೂ ಕೂಡಾ ತಾಲ್ಲೂಕು ಆಡಳಿತ ತಕ್ಷಣವೇ ಸ್ಪಂದಿಸಿದ ಪರಿಣಾಮವಾಗಿ ಕೆಲವೇ ಹೊತ್ತಿನಲ್ಲಿ ಹೊಸನಗರ ಸಾಗರ ಮಧ್ಯೆ ಸುಗಮ ಸಂಚಾರಕ್ಕೆ ಅಭಾದಿತವಾಗಿದ್ದು, ಗ್ರಾಮಸ್ಥರ ನೆರವಿನಿಂದ ಮರ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಕ್ಕಾಗಿ ಸಾರ್ವಜನಿಕರು ಸಹಕರಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಮೆಂಟ್‌ಗಳಿಲ್ಲ